ಬಹು ದಿನಗಳ ಬಳಿಕ ಜೊತೆಯಾಗಿ ಕಾಣಿಸಿಕೊಂದ ಬಿಗ್ ಬಾಸ್ ದೊಡ್ಡವ್ವ-ಚಿಕ್ಕವ್ವ

ಬಹು ದಿನಗಳ ಬಳಿಕ ಜೊತೆಯಾಗಿ ಕಾಣಿಸಿಕೊಂದ ಬಿಗ್ ಬಾಸ್ ದೊಡ್ಡವ್ವ-ಚಿಕ್ಕವ್ವ

ಬಹು ದಿನಗಳ ಬಳಿಕ ಜೊತೆಯಾಗಿ ಕಾಣಿಸಿಕೊಂದ ಬಿಗ್ ಬಾಸ್ ದೊಡ್ಡವ್ವ-ಚಿಕ್ಕವ್ವ

ಬಿಗ್ ಬಾಸ್ ಸೀಸನ್ 12ರಲ್ಲಿ ಹೆಚ್ಚು ಟ್ರೆಂಡಿಂಗ್, ಹೆಚ್ಚು ಟ್ರೋಲ್ ಗಳಿಗೆ, ಹೆಚ್ಚು ಕೋಪಕ್ಕೆ ಗುರಿಯಾದ ಜೋಡಿ ಅಂದ್ರೆ ಅದು ಅಶ್ವಿನಿ ಗೌಡ ಮತ್ತು ಆಂಕರ್ ಜಾಹ್ನವಿ. ಇದೀಗ ಬಹು ದಿನಗಳ ಬಳಿಕ ಈ ಜೋಡಿ ಜೊತೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 12ರಲ್ಲಿ ಕಿಚ್ಚು ಹಚ್ಚಿದ ಜೋಡಿ ಅಂದ್ರೆ ಅದು ಅಶ್ವಿನಿ ಗೌಡ ಮತ್ತು ನಿರೂಪಕಿ ಜಾಹ್ನವಿ ಜೋಡಿ. ಸೈಲೆಂಟ್ ಆಗಿದ್ದ ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಪ್ಲ್ಯಾನ್ ಮಾಡಿ, ರಕ್ಷಿತಾಳನ್ನು ಟಾರ್ಗೆಟ್ ಮಾಡಿ, ಕಿಚ್ಚು ಹಚ್ಚಿ, ಇಡೀ ಬಿಗ್ ಬಾಸ್ ಮನೆ ಮಾತ್ರವಲ್ಲ ಬಿಗ್ ಬಾಸ್ ವೀಕ್ಷಕರು ಕೂಡ ಏನಾಗ್ತಿದೆ ಎಂದು ಕಾದು ನೋಡುವಂತೆ ಮಾಡಿದ ಜೋಡಿ ಇವರು.

ಇದೀಗ ಬಿಗ್ ಬಾಸ್ ಮುಗಿದು ಬಹಳ ದಿನಗಳ ಬಳಿಕ, ಗಿಲ್ಲಿಯಿಂದಾಗಿ ರಾಜ್ಯಾದ್ಯಂತ ಚಿಕ್ಕವ್ವ ಮತ್ತು ದೊಡ್ಡವ್ವ ಎಂದೇ ಜನಪ್ರಿಯತೆ ಪಡೆದ ಅಶ್ವಿನಿ ಗೌಡ ಮತ್ತು ಜಾಹ್ನವಿ ಜೊತೆಯಾಗಿ ಫೋಟೊ ಶೂಟ್ ಮಾಡಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋಸ್ ವೈರಲ್ ಆಗಿದ್ದು, ಅಭಿಮಾನಿಗಳು ಈ ಜೋಡಿಯನ್ನು ನೋಡಿ ಖುಷಿ ಪಟ್ಟಿದ್ದಾರೆ.

ನಟಿ ನಿರೂಪಕಿ ಜಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿ ಗೌಡ ಅವರ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿ, ‘ಇಡೀ ಜಗತ್ತು ವಿರುದ್ಧ ನಡೆದಾಗ, ಒಳಗೆ ಬರುವವನೇ ನಿಜವಾದ ಸ್ನೇಹಿತ. (A friend is the one who comes in when the whole world has gone out) ಎಂದು ತಮ್ಮ ಫ್ರೆಂಡ್ ಶಿಪ್ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಹೊರ ಬಂದ ಮೇಲೂ ಗಾಢವಾಗಿದೆ ಅನ್ನೋದನ್ನು ತೋರಿಸಿದ್ದಾರೆ.

ಬಹಳ ದಿನಗಳ ಬಳಿಕ ಇಬ್ಬರನ್ನು ಜೊತೆಯಾಗಿ ಕಂಡ ಅಭಿಮಾನಿಗಳು. ಇವರ ಸ್ನೇಹಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇಬ್ಬರು ಯಾವಾಗಲೂ ಹೀಗೆ ಜೊತೆಯಾಗಿರಬೇಕು ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲ, ಫ್ರೆಂಡ್ ಶಿಪ್ ಅಂದರೆ ಹೀಗೆ ಇರಬೇಕು ಎಂದು ಹೇಳಿದ್ದಾರೆ.

ಜಾಹ್ನವಿ ಮತ್ತು ಅಶ್ವಿನಿ ಇಬ್ಬರೂ ಯಾವಾಗಲೂ ಹೀಗೆ ಸಂತೋಷದಿಂದ, ನಗುಮುಖದಿಂದ ಇರೋದು ನೋಡುವವರಿಗೆ ತುಂಬಾ ಹರ್ಷ ಕೊಡುತ್ತದೆ. ಅವರ ಸ್ನೇಹದಲ್ಲಿ ಇರುವ ನಿಷ್ಠೆ, ಅರ್ಥೈಸಿಕೊಳ್ಳುವ ಗುಣ ಮತ್ತು ಒಬ್ಬರಿಗೊಬ್ಬರು ನೀಡುವ ಬೆಂಬಲವೇ ಈ ಸ್ನೇಹವನ್ನು ಇನ್ನಷ್ಟು ಸುಂದರವಾಗಿಸುತ್ತದೆ. ಜೀವನದಲ್ಲಿ ಎಷ್ಟೇ ಏರುಪೇರುಗಳು ಬಂದರೂ, ಹೀಗೆ ಒಟ್ಟಿಗೆ ಇದ್ದು ಪರಸ್ಪರ ಸಹಾಯ ಮಾಡಿಕೊಂಡು ಮುಂದೆ ಸಾಗಿದರೆ ಅವರ ಸ್ನೇಹ ಸದಾಕಾಲ ಹಸಿರಾಗಿರುತ್ತದೆ. ದೇವರು ನಿಮಿಬ್ಬರನ್ನೂ ಸದಾ ಸಂತೋಷದಿಂದ, ಆರೋಗ್ಯದಿಂದ ಇರಲಿ ಮತ್ತು ನಿಮ್ಮ ಸ್ನೇಹ ಇನ್ನಷ್ಟು ಬಲವಾಗಲಿ ಎಂದು ಹಾರೈಸುತ್ತೇನೆ ಎಂದು ಒಬ್ಬರು ಅಭಿಮಾನಿ ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ಮುಗಿದ ಮೇಲೆ ಜಾಹ್ನವಿ, ಫಿನಾಲೆಗೂ ಬಂದಿರಲಿಲ್ಲ. ಆದರೆ ಬಳಿಕ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಒಂದು ಹೊಸ ಸಿನಿಮಾಗೆ ಕೂಡ ಜಾಹ್ನವಿ ಸಹಿ ಹಾಕಿದ್ದರು. ಅಶ್ವಿನಿ ಗೌಡ ಇದುವರೆಗೂ ಯಾವುದೇ ಸಿನಿಮಾ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಆದರೆ ಕನ್ನಡ ಟಿವಿ ಶೋಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಿರುತ್ತಾರೆ.

Source link

Leave a Reply

Your email address will not be published. Required fields are marked *