ಕಥೆಕದ್ದ ಆರೋಪದ ಬೆನ್ನಲ್ಲೇ ‘ಧುರಂಧರ್ 2’ ಚಿತ್ರಕ್ಕೆ ಮತ್ತೊಂದು ಶಾಕ್; ಪ್ರಮುಖ ಹಾಡು ಡಿಲೀಟ್?

ಕಥೆಕದ್ದ ಆರೋಪದ ಬೆನ್ನಲ್ಲೇ ‘ಧುರಂಧರ್ 2’ ಚಿತ್ರಕ್ಕೆ ಮತ್ತೊಂದು ಶಾಕ್; ಪ್ರಮುಖ ಹಾಡು ಡಿಲೀಟ್?


ಕಥೆಕದ್ದ ಆರೋಪದ ಬೆನ್ನಲ್ಲೇ 'ಧುರಂಧರ 2' ಚಿತ್ರಕ್ಕೆ ಮತ್ತೊಂದು ಶಾಕ್; ಪ್ರಮುಖ ಹಾಡು ಡಿಲೀಟ್?

‘ಧುರಂಧರ 2’ (ಧುರಂಧರ 2) ರಿಲೀಸ್ ಆಗಿ ತಿಂಗಳು ಕಳೆಯುತ್ತಾ ಬರುತ್ತಿರುವಾಗ ಚಿತ್ರಕ್ಕೆ ತೊಂದರೆ ಎದುರಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಕಥೆ ಕದ್ದಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಸಿನಿಮಾದ ಹಾಡೊಂದಕ್ಕೆ ಕತ್ತರಿ ಬೀಳುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಆ ಹಾಡನ್ನು ಉಳಿಸಿಕೊಳ್ಳಬೇಕು ಎಂದಾದರೆ ದೊಡ್ಡ ಮೊತ್ತವನ್ನು ಕೊಡಬೇಕಾಗಿ ಬರಹುದು ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಧುರಂಧರ 2’ ಸಿನಿಮಾನ ಆದಿತ್ಯ ಧಾರ್ ಹಾಗೂ ಜಿಯೋ ಸ್ಟುಡಿಯೋ ಒಟ್ಟಾಗಿ ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಅನೇಕ ಹಳೆಯ ಹಾಡುಗಳನ್ನು ಬಳಸಲಾಗಿದೆ. ಈ ಸಿನಿಮಾದಲ್ಲಿ ‘ರಂಗ್ ದೇ ಲಾಲ್’ ಎಂಬ ಹಾಡಿದೆ. ಈ ಚಿತ್ರದ ಮೂಲ ಹಾಡು ‘ತ್ರಿದೇವ್’ನಲ್ಲಿ ಬಳಕೆಯಾಗಿದೆ. ಈ ಹಾಡನ್ನು ಆನಂದ್ ಭಕ್ಷಿ, ಕಲ್ಯಾಣ್, ಆನಂದ್ ಕಂಪೋಸ್ ಮಾಡಿದ್ದರು. ಈ ಹಾಡನ್ನು ಅಮಿತ್ ಕುಮಾರ್ ಹಾಗೂ ಸಪ್ನಾ ಮುಖರ್ಜಿ ಹಾಡಿದ್ದರು.

ಈಗ ತ್ರಿಮೂರ್ತಿ ಫಿಲ್ಮ್ಸ್ ಅವರು ಈ ಹಾಡಿನ ಹಕ್ಕು ತಮ್ಮದು ಎಂದು ಪ್ರತಿಪಾದಿಸಿದ್ದಾರೆ. ‘ರಂಗ್ ದೇ ಲಾಲ್’ ಹಾಡು ನಮ್ಮ ಹಾಡಿಗೆ ಹೋಲಿಕೆಯಾಗುತ್ತದೆ ಎಂಬುದು ಕಂಪನಿಯ ಆರೋಪ. ಸರಿಯಾದ ಒಪ್ಪಿಗೆ ಪಡೆಯದೇ ಈ ಹಾಡನ್ನು ಬಳಸಲಾಗಿದೆ ಎಂಬುದು ತ್ರಿಮೂರ್ತಿ ಫಿಲ್ಮ್ಸ್ ಆರೋಪ.

ತ್ರಿಮೂರ್ತಿ ಫಿಲ್ಮ್ಸ್ ಸದ್ಯ ಈ ಹಾಡನ್ನು ಬಳಕೆ ಮಾಡದಂತೆ ಆದೇಶ ಎಂದು ಕೋರ್ಟ್ ಬಳಿ ಕೋರಿದೆ. ಜೊತೆಗೆ ಈ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಿದ್ದಕ್ಕೆ ಹಣ ಎಂದು ಬೇಡಿಕೆ ಇಟ್ಟಿದೆ. ಒಂದೊಮ್ಮೆ ‘ಧುರಂಧರ 2’ ತಂಡದ ತಪ್ಪು ಕಂಡು ಬಂದು ಈ ಆದೇಶ ಹೊರಡಿಸಿದರೆ ಸಿನಿಮಾಗೆ ಸಾಕಷ್ಟು ನಷ್ಟವಾಗಲಿದೆ.

ಇದನ್ನೂ ಓದಿ: ಧುರಂಧರ ರಣವೀರ್ ಸಿಂಗ್ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ; ಕರೀನಾ ಕಪೂರ್

ಈ ಮೊದಲು ‘ಧುರಂಧರ 2’ ವಿರುದ್ಧ ಕಥೆ ಕದ್ದ ಆರೋಪ ಬಂದಾಗ ಇದನ್ನು ನಿರ್ದೇಶಕ ಆದಿತ್ಯ ಧಾರ್ ಅವರು ನಿರಾಕರಿಸಿದ್ದರು. ಈಗ ಈ ಆರೋಪವನ್ನು ತಂಡವು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *