ಟರ್ಕಿ, ಏಪ್ರಿಲ್ 15: ಆಗ್ನೇಯ ಟರ್ಕಿಯ ಶಾನ್ಲಿಯುರ್ಫಾ ಪ್ರಾಂತ್ಯದ ಶುಕ್ರವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಉದ್ದನೆಯ ಬ್ಯಾರೆಲ್ ಆಯುಧ ಶಾಲೆಗೆ ನುಗ್ಗಿದ ಯುವಕನೊಬ್ಬ ನಡೆಸಿದ ಮನಬಂದಂತೆ ಗುಂಡಿನ ದಾಳಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಟ್ಟು 16 ಮಂದಿ ಇದ್ದಾರೆ. ಸಿವೆರೆಕ್ ಜಿಲ್ಲೆಯ ಅಹ್ಮೆತ್ ಕೊಯುಂಕು ವೃತ್ತಿಪರ ಮತ್ತು ತಾಂತ್ರಿಕ ಅನಟೋಲಿಯನ್ ಕಾಲೇಜಿನಲ್ಲಿ ಬೆಳಿಗ್ಗೆ ತರಗತಿಗಳು ಪ್ರಾರಂಭವಾಗುವ ಹೊತ್ತಿಗೆ ಈ ಘಟನೆ ನಡೆಯಿತು.
ಸುಮಾರು 17-18 ವರ್ಷದ ಅಪರಿಚಿತ ಯುವಕನೊಬ್ಬ ಮಾರಕಾಸ್ತ್ರದೊಂದಿಗೆ ಶಾಲಾ ಆವರಣಕ್ಕೆ ನುಗ್ಗಿದ್ದಾನೆ. ಮೊದಲು ಅಂಗಗಳಲ್ಲಿ ಯಾದೃಚ್ಛಿಕವಾಗಿ ಗುಂಡು ಹಾರಿಸಿದ ಆತ, ನಂತರ ಕಿರುಚುತ್ತಾ ಶಾಲಾ ಕಟ್ಟಡದೊಳಗೆ ನುಗ್ಗಿದ್ದಾನೆ. ಇದರಿಂದ ಭಯಭೀತರಾದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ದಾಳಿಕೋರ ಯುವಕ ತನ್ನ ಆಯುಧದಿಂದ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗವರ್ನರ್ ದೃಢಪಡಿಸಿದ್ದಾರೆ. ಸಣ್ಣ ವಯಸ್ಸಿನ ಹುಡುಗ ಇಂಥಾ ದೊಡ್ಡ ದಾಳಿ ನಡೆಸಿದ್ದೇಕೆ, ಆಯುದ್ಧ ಇದ್ದೆಲ್ಲಿಂದ ಎಂಬ ಕುರಿತು ತನಿಖೆ ನಡೆಯುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ