
ಜೂನಿಯರ್ ಎನ್ಟಿಆರ್ ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಓದಿನ ಜೊತೆಗೆ ನೃತ್ಯ, ನಟನೆಯಲ್ಲೂ ಪ್ರತಿಭೆ ತೋರಿದರು. ಶಾಲಾ ದಿನಗಳಲ್ಲಿಯೇ ಕೂಚಿಪುಡಿ, ಭರತನಾಟ್ಯ ಕಲಿತರು. ಓದುತ್ತಿರುವಾಗಲೇ 1997ರಲ್ಲಿ ಗುಣಶೇಖರ್ ನಿರ್ದೇಶನದ “ಬಾಲರಾಮಾಯಣಂ” ಸಿನಿಮಾದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. ಇದರಲ್ಲಿ ಚಿಕ್ಕ ರಾಮನ ಪಾತ್ರದಲ್ಲಿ ಎನ್ಟಿಆರ್ ನಟನೆ ಪ್ರೇಕ್ಷಕರ ಮನಗೆದ್ದಿತು. ನಂತರ ತಾತ ನಂದಮೂರಿ ತಾರಕ ರಾಮರಾವ್, ಬಾಬಾಯಿ ಬಾಲಕೃಷ್ಣ ಜೊತೆಗೆ “ಬ್ರಹ್ಮರ್ಷಿ ವಿಶ್ವಾಮಿತ್ರ” ಹಿಂದಿ ವರ್ಷನ್ನಲ್ಲಿ ಚಿಕ್ಕವರಿದ್ದಾಗಲೇ ನಟಿಸಿದರು. ಆದರೆ ಆ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.
Jr. NTR as ‘Bhakta Markandeya’ which is a TV Serial Telecasted In ETV
Though He Has Family Support In Movies…But He Chose To Come Up By His Own Path 💯💗@tarak9999 #KomaramBheeemNTR #NTR#Celebrating20YearsOfNTR pic.twitter.com/LKdENBlODM
— NTR – KING OF MASS (@KingJrNTR) August 19, 2020