ನ್ಯೂಝಿಲೆಂಡ್ ತಂಡ ಪ್ರಕಟ: ಕೊನೆಗೂ ಸ್ಥಾನ ಪಡೆದ ಕೇನ್ ವಿಲಿಯಮ್ಸನ್

ನ್ಯೂಝಿಲೆಂಡ್ ತಂಡ ಪ್ರಕಟ: ಕೊನೆಗೂ ಸ್ಥಾನ ಪಡೆದ ಕೇನ್ ವಿಲಿಯಮ್ಸನ್


ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರು ಈ ತಂಡದಲ್ಲಿ ಕೇನ್ ವಿಲಿಯಮ್ಸನ್ ಕಾಣಿಸಿಕೊಂಡಿರುವುದು ವಿಶೇಷ. ಅಂದರೆ ಕಳೆದ 7 ತಿಂಗಳುಗಳಿಂದ ವಿಲಿಯಮ್ಸನ್ ಯಾವುದೇ ರಾಷ್ಟ್ರೀಯ ಪಂದ್ಯವಾಡಲಿಲ್ಲ.

ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಕೆಲ ಸರಣಿಗಳಿಂದ ಹೊರಗಿಡಲಾಗಿದೆ. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರಲಿಲ್ಲ. ಇದೀಗ ಏಕದಿನ ಸರಣಿಗೆ ಆಯ್ಕೆಯಾಗಿದೆ. ಈ ಮೂಲಕ ಏಳು ತಿಂಗಳುಗಳ ನಂತರ ಮತ್ತೆ ಕಣಕ್ಕಿಳಿಯಲು ಕೇನ್ ಸಜ್ಜಾಗಿದ್ದಾರೆ.

ಇನ್ನು ನ್ಯೂಝಿಲೆಂಡ್ ಏಕದಿನ ತಂಡದ ನಾಯಕರಾಗಿ ಮೈಕೆಲ್ ಸ್ಯಾಂಟ್ ಮುಂದುವರೆದಿದ್ದು, ಕೀಪರ್ ಆಗಿ ಟಾಮ್ ಲ್ಯಾಥಮ್ ಆಯ್ಕೆಯಾಗಿದೆ. ಜೊತೆಗೆ ಆಲ್ರೌಂಡರ್ ಸ್ಥಾನದಲ್ಲಿ ಮೈಕೆಲ್ ಬ್ರೆಸ್ವೆಲ್ ಹಾಗೂ ರಚಿನ್ ರವೀಂದ್ರಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಇದಾಗ್ಯೂ ಗಾಯದಿಂದ ಬಳಲುತ್ತಿರುವ ಆಲ್ ರೌಂಡರ್ ಗ್ಲೆನ್ ಫಿಲಿಪ್, ವೇಗಿ ವಿಲಿಯಮ್ ಒರೋಕ್, ಲಾಕಿ ಫರ್ಗುಸನ್ ಈ ಸರಣಿಗೂ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ತಂಡದಲ್ಲಿ ಕೈಲ್ ಜೇಮಿಸನ್, ಮಾರ್ಕ್ ಚಾಪ್ಮನ್, ಜೇಕಬ್ ಡಫಿ ಕಾಣಿಸಿಕೊಂಡಿದ್ದಾರೆ. ಅದರಂತೆ ನ್ಯೂಝಿಲೆಂಡ್ ಏಕದಿನ ತಂಡ ಈ ಕೆಳಗಿನಂತಿದೆ…

ನ್ಯೂಜಿಲೆಂಡ್ ಏಕದಿನ ತಂಡ: ಮೈಕೆಲ್ ಸ್ಯಾಂಟ್ನರ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಮೈಕೆಲ್ ಬ್ರೆಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಡೇರಿಲ್ ಮಿಚೆಲ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ಕೆನ್ ವಿಲಿಯಮ್.

ನ್ಯೂಝಲೆಂಡ್ ವಿರುದ್ಧ ಇಂಗ್ಲೆಂಡ್ ಏಕದಿನ ಸರಣಿ ಕಾರ್ಯಕ್ರಮ:

  • ಅಕ್ಟೋಬರ್ 26- ನ್ಯೂಜಿಲೆಂಡ್ vs ಇಂಗ್ಲೆಂಡ್ ಮೊದಲ ಏಕದಿನ ಪಂದ್ಯ (ಮೌಂಟ್ ಮಂಗನುಯಿ)
  • ಅಕ್ಟೋಬರ್ 29- ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯ (ಹ್ಯಾಮಿಲ್ಟನ್)
  • ನವೆಂಬರ್ 1- ನ್ಯೂಜಿಲೆಂಡ್ vs ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯ (ವೆಲ್ಟಿಂಗ್ಟನ್)

ಇದನ್ನೂ ಓದಿ: ಸಿಕ್ಸ್ ಸಿಡಿಸಿಯೇ ಭರ್ಜರಿ ದಾಖಲೆ ಬರೆದ ಫಿಲ್ ಸಾಲ್ಟ್

ನ್ಯೂಜಿಲೆಂಡ್ ಟಿ20 ತಂಡ: ಮೈಕೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಜ್ಯಾಕ್ ಫಾಲ್ಕ್ಸ್, ಮ್ಯಾಟ್ ಹೆನ್ರಿ, ಬೆವೊನ್ ಜೇಕಬ್ಸ್, ಕೈಲ್ ಜೇಮಿಸನ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ರಚಿನ್ ರವೀಂದ್ರ, ಟಿವಿಮ್ ರಾಬಿನ್ಸನ್, ಮತ್ತು (ಕೀಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್).

ರಂದು ಪ್ರಕಟಿಸಲಾಗಿದೆ – 10:59 am, ಮಂಗಳವಾರ, 21 ಅಕ್ಟೋಬರ್ 25



Source link

Leave a Reply

Your email address will not be published. Required fields are marked *