“ನನ್ನನ್ನ ಯಾಕೆ ಮದುವೆಯಾಗಲ್ಲ?”: ನಡುರಸ್ತೆಯಲ್ಲೇ ಯುವತಿಯನ್ನು ಬೆದರಿಸಿದ ಮುಸ್ತಫಾ ಖಾದ್ರಿ; ವಿಡಿಯೋ ವೈರಲ್

“ನನ್ನನ್ನ ಯಾಕೆ ಮದುವೆಯಾಗಲ್ಲ?”: ನಡುರಸ್ತೆಯಲ್ಲೇ ಯುವತಿಯನ್ನು ಬೆದರಿಸಿದ ಮುಸ್ತಫಾ ಖಾದ್ರಿ; ವಿಡಿಯೋ ವೈರಲ್


ಕೊಪ್ಪಳ, ಏ.14: ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿರುವ ಮುಸ್ತಫಾ ಖಾದ್ರಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಹೊಸ ವಿಡಿಯೋ ವೈರಲ್ ಆಗಿದ್ದು, ಆರೋಪಿಯ ಅಸಲಿ ಮುಖವಾಡ ಕಳಚಿದೆ. ಯುವತಿಯೊಬ್ಬಳನ್ನು ಬಲವಂತವಾಗಿ ಪ್ರೀತಿಸುವಂತೆ ಮತ್ತು ಮದುವೆಯಾಗುವಂತೆ ಮುಸ್ತಫಾ ಪೀಡಿಸುತ್ತಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮುಸ್ತಫಾ ಖಾದ್ರಿ ಬೈಕ್ ಮೇಲೆ ಕುಳಿತು ಯುವತಿಯ ಜೊತೆ ಜಗಳವಾಡುತ್ತಿದ್ದಾನೆ. “ಇಷ್ಟು ದಿನ ಮಾತಾಡಿದ್ದು, ಲವ್ ಮಾಡಿದ್ದೇನು? ಈಗ ಯಾಕೆ ನನ್ನನ್ನ ಲವ್ ಮಾಡಲ್ಲ, ಮದುವೆಯಾಗಲ್ಲ ಅಂತೀಯಾ?” ಎಂದು ಪ್ರಶ್ನಿಸುತ್ತಾ ರಂಪಾಟ ಮಾಡಿದ್ದಾನೆ. ಅಷ್ಟೇ ಅಲ್ಲದೆ, “ನೀನು ಮತ್ತೊಬ್ಬ ಹುಡುಗನ ಜೊತೆ ಯಾಕೆ ಮಾತಾಡ್ತೀಯಾ?” ಎಂದು ಯುವತಿಯ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಾನೆ.ಮುಸ್ತಫಾನ ಕಿರುಕುಳಕ್ಕೆ ಬಗ್ಗದ ಯುವತಿ, “ನಿನ್ನ ಬಗ್ಗೆ ನನಗೆ ಈಗ ಪೂರ್ತಿ ಅರ್ಥ, ಇಲ್ಲದಿದ್ದರೆ ನಿನ್ನನ್ನು ಲವ್ ಮಾಡಲು ಸಾಧ್ಯವಿಲ್ಲ” ಎಂದು ನೇರವಾಗಿ ಹೇಳಿದ್ದಾಳೆ. ಜೊತೆಗೆ, “ನನ್ನನ್ನು ಪ್ರಶ್ನಿಸಲು ನಿನಗೆ ಯಾವುದೇ ಹಕ್ಕಿಲ್ಲ (ಹಕ್ಕುಗಳು)” ಎಂದು ಮುಸ್ತಫಾನಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾಳೆ.

ಇದನ್ನೂ ಓದಿ: ಲವ್ ಜಿಹಾದ್ ಪ್ರಕರಣ: 9000 ವಿಡಿಯೋ, ಫೋಟೋ ಪತ್ತೆಯಾದ್ರೂ ಅರೆಸ್ಟ್ ಇಲ್ಲವೇ? ಪೊಲೀಸರಿಗೆ ಕಾಂಗ್ರೆಸ್ ಶಾಸಕರಿಂದ ಒತ್ತಡದ ಆರೋಪ

ಇಲ್ಲಿದೆ ನೋಡಿ ವಿಡಿಯೋ:

ಜಗಳವಾಡುವ ಸಂದರ್ಭದಲ್ಲೇ ಮುಸ್ತಫಾ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. “ಈ ವಿಡಿಯೋ ಮುಂದೆ ಬೇಕಾಗುತ್ತೆ, ಮಾತಾಡು” ಎಂದು ಹೇಳಿರುವುದು ಯುವತಿಯನ್ನು ಬ್ಲಾಕ್‌ಮೇಲ್ ಮಾಡಲು ಮೊದಲೇ ಸಂಚು ರೂಪಿಸಿದ್ದನೇ ಎಂಬ ಅನುಮಾನವನ್ನು ಬಲಪಡಿಸಿದೆ. ಸಾವಿರಾರು ವಿಡಿಯೋಗಳು ಈತನ ಮೊಬೈಲ್‌ನಲ್ಲಿ ಲಭ್ಯವಿದ್ದು, ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಕ್ರಮ ಕೈಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *