ಬೆಂಗಳೂರು, ಅಕ್ಟೋಬರ್ 19: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಆರೋಪಿ ಡಾ. ಮಹೇಂದ್ರ ರೆಡ್ಡಿ ಸಹೋದರನಿಗೂ ಕ್ರಿಮಿನಲ್ ಹಿನ್ನಲೆ ಇದೆ ಎಂದು ಕೃತಿಕಾ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಾಣ ಉಳಿಸುವವರೇ ಪ್ರಾಣ ತೆಗೆಯುವ ಕೆಲಸ ಮಾಡಿದ್ದಾರೆ. ಮಹೇಂದ್ರ ರೆಡ್ಡಿ ಸಹೋದರನ ಮೇಲೂ ಹುಡುಗಿಗೆ ಮೋಸ ಮಾಡಿದ ಆರೋಪವಿದೆ. 20 ಲಕ್ಷ ಕೊಟ್ಟು ಆತ ಈಗ ಕೇಸ್ ನ ಸೆಟಲ್ ಮೆಂಟ್ ಮಾಡಿಕೊಂಡಿದ್ದಾನೆ. ಅವರದ್ದೇ ಮೆಡಿಕಲ್ ಸ್ಟೋರ್ ಇದ್ದು ಕೃತಿಕಾ ಕೊಲೆಗೆ ಬಳಸಲಾದ ಅನಸ್ತೇಶಿಯ ಅಲ್ಲಿಂದಲೇ ತಂದಿರಬಹುದು. ಮಹೇಂದ್ರ ರೆಡ್ಡಿ ಈ ಹಿಂದೆ ಎಷ್ಟು ಜನ ಹುಡುಗಿಯರಿಗೆ ಮೋಸ ಮಾಡಿದ್ದಾನೆ ಎಂಬ ಬಗ್ಗೆಯೂ ತನಿಖೆ ಆಗಬೇಕು. ಅವನಿಗೆ ಇಷ್ಟವಿಲ್ಲದಿದ್ದರೆ ನಮ್ಮ ಬಳಿ ಹೇಳಬೇಕಿತ್ತು, ಅದನ್ನು ಈ ರೀತಿ ಕೊಲೆ ಮಾಡಿರೋದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.