ಚಾಮರಾಜನಗರ, ಡಿಸೆಂಬರ್ 23: ಚಿರತೆ ಸೆರೆಗೆ ಅರಣ್ಯ ಇಲಾಖೆ ಅಳವಡಿಸಿದ್ದ ಘಟನೆ ಬೋನಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿಕೊಂಡ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕಿಟ್ಟಿ ಎಂಬ ವ್ಯಕ್ತಿ ಕುತೂಹಲದಿಂದ ಚಿರತೆ ಹಿಡಿಯಲು ಇಟ್ಟಿದ್ದ ಬೋನಿನ ಒಳಗೆ ತೆರಳಿದ್ದಾಗ, ಆಕಸ್ಮಿಕವಾಗಿ ಬೋನಿನ ಗೇಟ್ ಲಾಕ್ ಆಗಿ ಅವರು ಒಳಗೇ ಸಿಲುಕಿಕೊಂಡರು. ಬೋನಿನೊಳಗೆ ಕಾಲಿಟ್ಟ ಕೂಡಲೇ ಗೇಟ್ ಮುಚ್ಚಿಕೊಂಡ ಪರಿಣಾಮ, ಕಿಟ್ಟಿ ಸುಮಾರು ಮೂರು ಗಂಟೆಗಳ ಕಾಲ ಒಳಗೇ ಒದ್ದಾಡಿದ್ದಾರೆ. ಮೊಬೈಲ್ ಸಹ ತೆಗೆದುಕೊಂಡ ಹೋಗದ ಕಾರಣ ಕಾಲ್ ಮಾಡಿ ಯಾರಿಗೂ ತಿಳಿಸುವ ಸ್ಥಿತಿಯಲ್ಲಿ ಕಿಟ್ಟಿ ಇರಲಿಲ್ಲ. ಕೊನೆಗೆ ಜಮೀನಿಗೆ ಕೆಲಸಕ್ಕೆ ಬಂದ ಸ್ಥಳೀಯರು ಬೋನಿನೊಳಗೆ ಸಿಲುಕಿದ್ದಾರೆ. ಸ್ಥಳೀಯರ ಸಹಾಯದಿಂದ ಬೋನಿನ ಗೇಟ್ ತೆರೆಯಲು, ಕಿಟ್ಟಿ ಸುರಕ್ಷಿತವಾಗಿ ಹೊರಬಂದಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ