
ಈ ಹಿಂದಿನ ಸಂದರ್ಶನದಲ್ಲಿ ಕಿರಣ್ ರಾಜ್ ಅವರು, ವೈದ್ಯನ ಪಾತ್ರ ಮಾಡಲು ತಾವು ಹೇಗೆಲ್ಲಾ ಪ್ರಿಪೇರ್ ಆಗಿದ್ದು ಎನ್ನುವ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದರು. ‘ಆಸ್ಪತ್ರೆಗಳಿಗೆ ಭೇಟಿ ಕೊಟ್ಟು, ಹಲವು ವೈದ್ಯರ ಜೊತೆ ಮಾತನಾಡಿದ್ದೇನೆ. ಡಾಕ್ಟರ್ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಸ್ಟಡಿಮಾಡಿದ್ದೇನೆ. ಮಾತ್ರವಲ್ಲದೇ ಪ್ರಸವದ ಸಮಯದಲ್ಲಿ ಏನಾಗುತ್ತದೆ, ಮಹಿಳೆಯರ ಮನಸ್ಥಿತಿ ಹೇಗೆ ಇರುತ್ತದೆ, ಕರ್ನಾಟಕದಲ್ಲಿ ಗರ್ಭಿಣಿಯರ ಸಾವು ಯಾಕೆ ಆಗ್ತಿದೆ, ಇದನ್ನು ತಡೆಯಲು ಏನು ಮಾಡಬಹುದು, ಹೆರಿಗೆ ಸಮಯದಲ್ಲಿ ರಕ್ತದ ಕೊರತೆ ಏಕೆ ಕಾಡುತ್ತಿದೆ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ ಕೊರತೆ ಇವೆ ಇವೆಲ್ಲವುಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ’ ಎಂದಿದ್ದರು.