Headlines

ಪತ್ನಿಯ ಕೊಂದು ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ ಪತಿ, ಅಪ್ಪ ಮಾಡಿದ್ದನ್ನ ಕಣ್ಣಾರೆ ಕಂಡು ಸತ್ಯ ಬಿಚ್ಚಿಟ್ಟ 4 ವರ್ಷದ ಮಗ

ಪತ್ನಿಯ ಕೊಂದು ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ  ಪತಿ, ಅಪ್ಪ ಮಾಡಿದ್ದನ್ನ ಕಣ್ಣಾರೆ ಕಂಡು ಸತ್ಯ ಬಿಚ್ಚಿಟ್ಟ 4 ವರ್ಷದ ಮಗ


ಒಡಿಶಾ, ಏಪ್ರಿಲ್ 14: ಕುಡಿತದ ಅಮಲು ಮತ್ತು ಅನಗತ್ಯ ಸಂಶಯ ಒಂದು ಸಂಸಾರವನ್ನು ಬೀದಿಪಾಲು ಮಾಡುತ್ತಿದೆ ಎಂಬುದಕ್ಕೆ ಒಡಿಶಾದ ಬೋರ್ಗಾನ್ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಹೆಂಡತಿಯ ನಡತೆಯ ಮೇಲೆ ಸಂಶಯಪಟ್ಟ ವ್ಯಕ್ತಿಯೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ(ಕೊಲೆ) ಮಾಡಿ, ಶವವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದಾನೆ. ಆದರೆ, ತಾನು ಮಾಡಿದ್ದನ್ನು ಯಾರಿಗೂ ತಿಳಿಯದಂತೆ ಬಚ್ಚಿಡಬಹುದು ಅಂದುಕೊಂಡಿದ್ದ ಹಂತಕನಿಗೆ ತನ್ನ 4 ವರ್ಷದ ಮಗನೇ ಸಾಕ್ಷಿಯಾಗುತ್ತಾನೆ ಎಂದು ತಿಳಿದಿರಲಿಲ್ಲ.

ಸಂಭ್ರಮದ ಬೆನ್ನಲ್ಲೇ ಸಂಭವಿಸಿದ ದುರಂತ
ಬೋರ್ಗಾನ್ ಗ್ರಾಮದ ಸುಬಾಶ್ ಗೊಂಡ್ ಮತ್ತು ಮನೈ ಗೊಂಡ ದಂಪತಿಗಳು ಏಪ್ರಿಲ್ 11 ರಂದು ತಮ್ಮ ಮಕ್ಕಳೊಂದಿಗೆ ಪರ್ಯಾಯ ಮದುವೆ ಕಾರ್ಯಕ್ರಮಕ್ಕೆ ಮನೆಗೆ ಮರಳಿದ್ದರು. ಮದುವೆಯ ಸಂಭ್ರಮ ಮುಗಿಸಿ ಬಂದ ಪತಿ ಸುಬಾಷ್ ಕುಡಿದ ಮತ್ತಿನಲ್ಲಿದ್ದ. ಮನೆಗೆ ಬಂದ ನಂತರ ಪತ್ನಿಯ ಚಾರಿತ್ರ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿ ಜಗಳ ಆರಂಭಿಸಿದ. ವಾಗ್ವಾದ ತಾರಕಕ್ಕೇರಿ ಸುಬಾಶ್ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಈ ಭೀಕರ ಹಲ್ಲೆಯಿಂದಾಗಿ ಮನೈ ಗೊಂಡ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಪತ್ನಿ ಸತ್ತಿದ್ದಾಳೆ ಎಂದು ತಿಳಿದ ತಕ್ಷಣ ಗಾಬರಿಗೊಂಡ ಸುಬಾಶ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ. ಮೃತದೇಹವನ್ನು ಯಾರಿಗೂ ಕಾಣದಂತೆ ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದು ಏನೂ ಅರಿಯದವನಂತೆ ನಾಟಕವಾಡಿದ್ದಾನೆ. ಮನೆಯಲ್ಲಿ ತಾಯಿ ಕಾಣದಿದ್ದಾಗ ನೆರೆಹೊರೆಯವರು ವಿಚಾರಿಸಿದಾಗ ಆತ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ.

ಮತ್ತಷ್ಟು ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಪತ್ನಿ; ಕೊಲೆ ಬಳಿಕ ಅಮಾಯಕಳಂತೆ ನಾಟಕ

ಅಪ್ಪನ ಕ್ರೌರ್ಯ ಬಿಚ್ಚಿಟ್ಟ ಮಗ
ತಂದೆ ತನ್ನ ತಾಯಿಯನ್ನು ಹೊಡೆದದ್ದು ಮತ್ತು ಆಕೆಯ ದೇಹವನ್ನು ಗುಂಡಿಗೆ ಎಸೆದದ್ದು 4 ವರ್ಷದ ಮಗ ಕಣ್ಣಾರೆ ಕಂಡಿದ್ದ. ಮುಗ್ದ ಮಗುವಿಗೆ ತನ್ನ ತಾಯಿ ಮತ್ತೆ ಬರುವುದಿಲ್ಲ ಎಂಬ ಅರಿವಿಲ್ಲದಿದ್ದರೂ, ಅಪ್ಪ ಮಾಡಿದ ಕೃತ್ಯವನ್ನು ವಿವರಿಸಿದ್ದಾನೆ. ಮಗುವಿನ ಮಾತು ಕೇಳಿ ಬೆಚ್ಚಿಬಿದ್ದ ಗ್ರಾಮಸ್ಥರು ಸುಬಾಷ್‌ನನ್ನು ಹಿಡಿದು ವಿಚಾರಿಸಿದಾಗ ಮೊದಲು ಆತ ಮೊಂಡಾಟ ಮಾಡಿದರೂ, ಗ್ರಾಮಸ್ಥರ ಒತ್ತಡಕ್ಕೆ ಮಣಿದು ಅಂತಿಮವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸ್ ತನಿಖೆ
ತಕ್ಷಣ ಸ್ಥಳಕ್ಕೆ ಧಾವಿಸಿದ ನಬರಂಗ್‌ಪುರ ಪೊಲೀಸರು ಸೆಪ್ಟಿಕ್ ಟ್ಯಾಂಕ್‌ನಲ್ಲಿದ್ದ ಮನೈ ಗೊಂಡ್ ಅವರ ಶವವನ್ನು ಹೊರತೆಗೆದಿದ್ದಾರೆ. ಆರೋಪಿ ಸುಬಾಸ್ ಅವರನ್ನು ವಶಕ್ಕೆ ಪಡೆಯಲಾಯಿತು, ಘಟನೆ ನಡೆದ ಸಮಯದಲ್ಲಿ ಪತ್ನಿ ಕೂಡ ಮದ್ಯದ ಅಮಲಿನಲ್ಲಿದ್ದ ಕುಟುಂಬದ ಮೂಲಗಳು ತಿಳಿಸಿವೆ.

ತನ್ನ ತಂದೆಯೇ ತಾಯಿಯನ್ನು ಕೊಂದು ಟ್ಯಾಂಕ್‌ಗೆ ಹಾಕಿದ್ದಾನೆ ಎಂದು ಆ ಕಂದಮ್ಮ ಹೇಳುತ್ತಿರುವಾಗ ಕಣ್ಣಾಲಿಗಳು ತೇವವಾದವು. ತಾಯಿ ಸಾವನ್ನಪ್ಪಿ, ತಂದೆ ಜೈಲು ಪಾಲಾಗಿ ಈಗ ಆ ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *