ಟಾಕ್ಸಿಕ್ ಸಂಬಂಧದಲ್ಲಿ ಇದ್ದೆ ಎಂದ ರಶ್ಮಿಕಾ; ಸುಳ್ಳು ಎನ್ನಲು ಸಾಕ್ಷಿ ಸಮೇತ ಬಂದ ರಕ್ಷಿತ್ ಫ್ಯಾನ್ಸ್

ಟಾಕ್ಸಿಕ್ ಸಂಬಂಧದಲ್ಲಿ ಇದ್ದೆ ಎಂದ ರಶ್ಮಿಕಾ; ಸುಳ್ಳು ಎನ್ನಲು ಸಾಕ್ಷಿ ಸಮೇತ ಬಂದ ರಕ್ಷಿತ್ ಫ್ಯಾನ್ಸ್


ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಹಾಗೂ ರಕ್ಷಿತ್ ಶೆಟ್ಟಿ ಲವ್ ಇದ್ದರು ಎಂಬುದು ಹಳೆಯ ಕಥೆ. ಅದು ಮುಗಿದು ಹೋಗಿ ಹಲವು ವರ್ಷಗಳು ಕಳೆದಿವೆ. ಈ ಘಟನೆಯನ್ನು ಮರೆತು ರಕ್ಷಿತ್ ಮುಂದಕ್ಕೆ ಸಾಗಿದ್ದಾರೆ. ಆದರೆ, ರಶ್ಮಿಕಾ ಮಾತ್ರ ಇನ್ನೂ ಅಲ್ಲಿಯೇ ಸಿಕ್ಕಿ ಬಿದ್ದಂತೆ ಇದೆ. ‘ಗರ್ಲ್‌ಫ್ರೆಂಡ್’ ಸಿನಿಮಾದ ಈವೆಂಟ್ ಒಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಾನು ಟಾಕ್ಸಿಕ್ ರಿಲೇಶನ್ ಶಿಪ್‌ನಲ್ಲಿ ಇದ್ದೆ’ ಎಂಬ ಪರೋಕ್ಷ ಸ್ಟೇಟ್‌ಮೆಂಟ್ ಅವರ ಕಡೆಯಿಂದ ಬಂದಿದೆ. ಇದನ್ನು ಸುಳ್ಳು ಎಂದು ಸಾಕ್ಷಿ ಮಾಡಲು ರಕ್ಷಿತ್ ಫ್ಯಾನ್ಸ್ ಸಮೇತ ಬಂದಿದ್ದಾರೆ.

‘ಗರ್ಲ್‌ಫ್ರೆಂಡ್’ ಸಿನಿಮಾದಲ್ಲಿ ಟಾಕ್ಸಿಕ್ ಸಂಬಂಧದ ಬಗ್ಗೆ ಇದೆ. ಕಥಾ ನಾಯಕಿಯು ಹುಡಗನೊಬ್ಬನ ಪ್ರೀತಿಸುತ್ತಾಳೆ. ಆತನಿಗೆ ಪುರಷ ಅಹಂ ಹೆಚ್ಚಾಗಿರುತ್ತದೆ. ನಂತರ ಈ ಸಂಬಂಧ ವಿಷಕಾರಿಯಾಗಿ ಬದಲಾಗುತ್ತದೆ. ಆಗ ಪ್ರೊಫೆಸರ್ ಒಬ್ಬರು ಸಹಾಯಕ್ಕೆ ಬರುತ್ತಾರೆ. ಈ ಸಿನಿಮಾದ ಬಗ್ಗೆ ಮಾತನಾಡುವಾಗ ರಶ್ಮಿಕಾ ಹಳೆಯ ಸಂಬಂಧದ ಬಗ್ಗೆ ಹೇಳಲಾಗಿದೆ.

‘ಈ ಸಿನಿಮಾದ ಕಥೆ ಕೇಳಿದಾಗ ಮೊದಲು ಈ ಚಿತ್ರವನ್ನು ಮಾಡಬೇಕು ಎಂದೆನಿಸಿತು. ಕಥಾ ನಾಯಕಿಯ ಜೀವನದಲ್ಲಿ ಏನೆಲ್ಲ ಸಂಭವಿಸಿದೆಯೋ ಅದರಲ್ಲಿ ಕೆಲವು ಪರಿಸ್ಥಿತಿಗಳು ನನ್ನ ಜೀವನದಲ್ಲೂ ಸಂಭವಿಸಿದೆ. ಆಗ ನನ್ನ ಜೀವನದಲ್ಲಿ ಯಾರೂ ಇರಲಿಲ್ಲ. ಇದೆಲ್ಲ ನನ್ನದೇ ಮಿಸ್ಟೇಕ್ ಎನಿಸಿತು’ ಎಂದು ರಶ್ಮಿಕಾ ಹೇಳಿದ್ದಾರೆ.

‘ಶೂಟ್ ಶುರುವಾದ ಬಳಿಕ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಶೂಟಿಂಗ್ ಮಾಡುವಾಗ 30-40 ನಿಮಿಷಗಳು ನನಗೆ ಸುಧಾರಿಸಲು ಬೇಕಾಗುತ್ತಿತ್ತು. ಈ ಸಿನಿಮಾ ರಿಲೀಸ್ ಆಗಿ ಎಲ್ಲರೂ ನೋಡುತ್ತಿದ್ದಾರೆ ಎಂದಾಗ ಖುಷಿ ಆಗ್ತಿದೆ. ಕಡೆ ಎಲ್ಲೆಲ್ಲೂ ನೋವಿದೆ ಎಂದು ಮತ್ತೊಂದು ಅನಿಸುತ್ತಿದೆ. ನಿಮ್ಮೆಲ್ಲರಿಗೂ ದೊಡ್ಡ ಅಪ್ಪುಗೆ’ ರಶ್ಮಿಕಾ.

ಇದನ್ನೂ ಓದಿ: ‘ಎಲ್ಲರಿಗೂ ವಿಜಯ್ ಅಂತಹ ಹುಡುಗ ಸಿಗಲಿ’; ರಶ್ಮಿಕಾ ಮನದ ಬಯಕೆ

ಇದು ರಕ್ಷಿತ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ರಕ್ಷಿತ್ ಶೆಟ್ಟಿ ಅವರು ಬ್ರೇಕಪ್ ಆದ ಬಳಿಕ ಯಾವ ರೀತಿ ನಡೆದುಕೊಂಡರು ಎಂಬ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಕ್ಷಿತ್ ಅವರ ಸಂಬಂಧದ ಬಗ್ಗೆ ತುಂಬಾನೇ ಪ್ರಬುದ್ಧವಾಗಿ ಮಾತನಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *