Headlines

ಐಪಿಎಲ್​ಗೂ ಮುನ್ನ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಅರ್ಜುನ್- ಸಾನಿಯಾ; ದಿನಾಂಕ ಬಹಿರಂಗ

ಐಪಿಎಲ್​ಗೂ ಮುನ್ನ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಅರ್ಜುನ್- ಸಾನಿಯಾ; ದಿನಾಂಕ ಬಹಿರಂಗ


ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (ಸಚಿನ್ ತೆಂಡೂಲ್ಕರ್) ಅವರ ಮಗ ಅರ್ಜುನ್ ತೆಂಡೂಲ್ಕರ್ (ಅರ್ಜುನ್ ತೆಂಡೂಲ್ಕರ್) ಶೀಘ್ರದಲ್ಲೇ ತಮ್ಮ ದೀರ್ಘಕಾಲದ ಸಂಗಾತಿ ಸಾನಿಯಾ ಚಾಂದೋಕ್ (ಸಾನಿಯಾ ಚಂದೋಕ್) ಅವರನ್ನು ವಿವಾಹವಾಗಲಿದ್ದಾರೆ. ವರದಿಗಳ ಪ್ರಕಾರ, ಈ ಜೋಡಿ ಮಾರ್ಚ್ 2026 ರಲ್ಲಿ ವಿವಾಹವಾಗಲಿದ್ದು, ದಿನಾಂಕವನ್ನೂ ಸಹ ಬಹಿರಂಗಪಡಿಸಲಾಗಿದೆ. ವಾಸ್ತವವಾಗಿ ಕಳೆದ ಆಗಸ್ಟ್‌ನಲ್ಲಿ ಅರ್ಜುನ್ ಹಾಗೂ ಸಾನಿಯಾ ಅವರ ನಿಶ್ಚಿತಾರ್ಥ ಬಹಳ ಖಾಸಗಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬಗಳು ಮತ್ತು ಕೆಲವು ಆಪ್ತರು ಮಾತ್ರ ಮಾಡಿದರು. ಅದಾದ ಕೆಲವು ದಿನಗಳ ಬಳಿಕ ಸಚಿನ್ ತೆಂಡೂಲ್ಕರ್ ಅವರೇ ತಮ್ಮ ಮಗನ ನಿಶ್ಚಿತಾರ್ಥದ ವಿಚಾರವನ್ನು ಸಾರ್ವಜನಿಕಗೊಳಿಸಿದ್ದರು. ಇದೀಗ 2026 ರಲ್ಲಿ ಅರ್ಜುನ್ ಹಾಗೂ ಸಾನಿಯಾ ಹಸೆಮಣೆ ನಡೆಯಲಿದೆ.

ಅರ್ಜುನ್ ಮದುವೆ ದಿನಾಂಕ ಬಹಿರಂಗ

ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಐಪಿಎಲ್ 2026 ಕ್ಕೂ ಮುಂಚಿತವಾಗಿ ವಿವಾಹದ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಅರ್ಜುನ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ದಿನಾಂಕವನ್ನು ಮಾರ್ಚ್ 5, 2026 ರಂದು ನಿಗದಿಪಡಿಸಲಾಗಿದೆ. ಮಾರ್ಚ್ 3 ರಂದು ವಿವಾಹಪೂರ್ವ ಸಮಾರಂಭಗಳು ಪ್ರಾರಂಭವಾಗಲಿವೆ. ಸಾನಿಯಾ ಮುಂಬೈನ ಪ್ರಮುಖ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳಾಗಿದ್ದರೆ, ತೆಂಡೂಲ್ಕರ್ ಕುಟುಂಬಕ್ಕೆ ಬಹಳ ಹಿಂದಿನಿಂದಲೂ ಹತ್ತಿರವಾಗಿದ್ದಾರೆ. ವಿವಾಹ ಆಚರಣೆಗಳು ಮುಂಬೈನಲ್ಲಿ ನಡೆಯಲಿವೆ, ಕುಟುಂಬ, ಆಪ್ತ ಸ್ನೇಹಿತರು ಮತ್ತು ಕ್ರಿಕೆಟ್‌ನ ಕೆಲವು ಆಟಗಾರರು ಭಾಗವಹಿಸುವ ಖಾಸಗಿ ಕಾರ್ಯಕ್ರಮವಾಗಿದೆ ಎಂದು ವರದಿಯಾಗಿದೆ.

SMAT 2025: W,W,W.. ಅರ್ಜುನ್ ಮಾರಕ ದಾಳಿಗೆ ತತ್ತರಿಸಿದ ಮಧ್ಯಪ್ರದೇಶ; ಗೋವಾಗೇ 2ನೇ ಜಯ

ಲಕ್ನೋ ಪರ ಆಡಲಿರುವ ಅರ್ಜುನ್

ಇತ್ತೀಚೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ವರ್ಗಾವಣೆಗೊಂಡಿರುವ ಅರ್ಜುನ್ ತೆಂಡೂಲ್ಕರ್ ವೃತ್ತಿಜೀವನದಂತೆ ವೈಯಕ್ತಿಕ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹೀಗಾಗಿ 2026 ರ ವರ್ಷವು ಅರ್ಜುನ್‌ಗೆ ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸ್ಮರಣೀಯ ವರ್ಷಗಳು. ಪ್ರಸ್ತುತ ಗೋವಾ ತಂಡದ ಪರ ವಿಜಯ್ ಹಜಾರೆ ಟ್ರೋಫಿಯನ್ನು ಆಡುತ್ತಿರುವ ಅರ್ಜುನ್ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ, ಬ್ಯಾಟಿಂಗ್‌ನಲ್ಲಿ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:15 pm, ಬುಧವಾರ, 7 ಜನವರಿ 26



Source link

Leave a Reply

Your email address will not be published. Required fields are marked *