ಚಿಕ್ಕಬಳ್ಳಾಪುರ, (ಜನವರಿ 27): ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಿ ಶಿಡ್ಲಘಟ್ಟ ಜೆಎಂಎಫ್ ಸಿ ಕೋರ್ಟ್ ಆದೇಶ ಹೊರಡಿಸಿದೆ. ಆರೋಪಿ ರಾಜೀವ್ ಗೌಡನನ್ನು ಕೋರ್ಟ್ ನಿಂದ ಜೈಲಿಗೆ ಕರೆದೊಯ್ಯುವ ಸಂದರ್ಭದಲ್ಲಿ ಭಾರೀ ಹೈಡ್ರಾಮಾವೇ ನಡೆದಿದೆ. ಹೌದು…ರಾಜೀವ್ ಗೌಡ ನನ್ನ ಜೈಲಿಗೆ ಹೋಗುತ್ತಿದ್ದ ವಾಹನವನ್ನು ಕೋರ್ಟ್ ಬಳಿ ಅಡ್ಡಹಾಕಿ ಜೈಕಾರಕ್ಕೆ ಯತ್ನಿಸಿದ್ದಾರೆ. ಬಳಿಕ ಪೊಲೀಸರು ರಾಜೀವ್ ಗೌಡನ ಲಾಠಿ ರುಚಿ ತೋರಿಸಿ ಗುಂಪು ಚದುರಿಸಿದರು. ಬಳಿಕ ಜೈಲಿಗೆ ಕರೆದೊಯ್ದರು.