Headlines

ಭಾರ್ಗವಿ LLB ಗೆ ಎಂಟ್ರಿ ಕೊಡ್ತಿದ್ದಾರೆ ಬಿಗ್ ಬಾಸ್ ಬ್ಯೂಟಿ ಸ್ಪಂದನಾ ಸೋಮಣ್ಣ

ಭಾರ್ಗವಿ LLB ಗೆ ಎಂಟ್ರಿ ಕೊಡ್ತಿದ್ದಾರೆ ಬಿಗ್ ಬಾಸ್ ಬ್ಯೂಟಿ ಸ್ಪಂದನಾ ಸೋಮಣ್ಣ

ಭಾರ್ಗವಿ LLB ಗೆ ಎಂಟ್ರಿ ಕೊಡ್ತಿದ್ದಾರೆ ಬಿಗ್ ಬಾಸ್ ಬ್ಯೂಟಿ ಸ್ಪಂದನಾ ಸೋಮಣ್ಣ

ಬಿಗ್ ಬಾಸ್ ನಲ್ಲಿ ಮಿಂಚಿದ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಸುಂದರಿ ಸ್ಪಂದನಾ ಸೋಮಣ್ಣ ಶೀಘ್ರದಲ್ಲೇ ಭಾರ್ಗವಿ LLB ಧಾರಾವಾಹಿಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ. ಹಾಗಿದ್ರೆ ಸ್ಪಂದನಾ ಪಾತ್ರ ಏನಿರದೆ? ನಾಯಕಿ ಭಾರ್ಗವಿಗೆ ಎದುರಾಗುವ ಪಾತ್ರದಲ್ಲಿ ನಟಿಸುತ್ತಾರ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾರ್ಗವಿ LLB. ವಕೀಲೆಯಾಗಿರುವ ಭಾರ್ಗವಿ ಜೆಪಿ ಪಾಟೀಲ್ ವಿರುದ್ಧ ಹೋರಾಡುವ ಕಥೆ ಇದಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಖತ್ ಟ್ವಿಸ್ಟ್ ಮತ್ತು ಟರ್ನ್ ಗಳು ಧಾರಾವಾಹಿಯಲ್ಲಿ ಬಂದಿವೆ. ಇದೀಗ ಹೊಸ ಪಾತ್ರದ ಎಂಟ್ರಿಯಾಗಲಿದೆ.

ಸೋಶಿಯಲ್ ಮೀಡೀಯಾದಲ್ಲಿ ಪ್ರಸಾರವಾಗುತ್ತಿರುವ ಮಾಹಿತಿಯ ಪ್ರಕಾರ ಶೀಘ್ರದಲ್ಲಿ ನಟಿ ಸ್ಪಂದನಾ ಸೋಮಣ್ಣ ಭಾರ್ಗವಿ LLB ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದರೆ ಅವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಸ್ಪಂದನಾ ಸೋಮಣ್ಣ ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಗುರುತಿಸಿಕೊಂಡ ನಟಿ, ಸಿನಿಮಾ ಮಾಡಿದ್ದರು ಸೋತಿದ್ದರು. ಆದರೆ ನಟಿಸಿದ ಎರಡೂ ಧಾರಾವಾಹಿಗಳು ನಟಿಗೆ ಹೆಸರು ತಂದುಕೊಟ್ಟಿತು. ‘ಗೃಹಪ್ರವೇಶ’ ಧಾರಾವಾಹಿ ಬೇಗನೆ ಪ್ರಸಾರ ನಿಲ್ಲಿಸಿದರೂ, ‘ಕರಿಮಣಿ’ ಧಾರಾವಾಹಿಯಲ್ಲಿ ಸಾಹಿತ್ಯ ಆಗಿ ಜನ ಮನ ಗೆದ್ದಿದ್ದರು.

ಸೀರಿಯಲ್ ಬಳಿಕ ಸ್ಪಂದನಾ ಸೋಮಣ್ಣ ಬಿಗ್ ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಸಿ ಮಿಂಚಿದರು. ಈ ಸೀಸನ್ ನಲ್ಲಿ ಕಳ್ಳ ಪುಟ್ಟಿ ಎನ್ನುವ ಹೆಸರನ್ನು ಕೂಡ ಪಡೆದಿದ್ದರು. ಮುಗ್ಧ ನಡೆ, ಸರಳ ಸ್ಪಭಾವ, ಆಕೆಯ ಲೇಸಿನೆಸ್ ಮೂಲಕ ಸದ್ದು ಮಾಡಿದ್ದರು. ಜೊತೆಗೆ ಆಟ ಆಡನೆ ಕೊನೆಯ ವಾರದ ವರೆಗೂ ಬಂದಿದ್ದಾರೆ ಎಂದು ಟ್ರೋಲ್ ಕೂಡ ಆಗಿತ್ತು.

ಇದೀಗ ಭಾರ್ಗವಿ LLB ಮೂಲಕ ಮತ್ತೆ ಕಿರುತೆರೆಗೆ ಸ್ಪಂದನಾ ಎಂಟ್ರಿ ಕೊಡುತ್ತಿದ್ದಾರೆ. ಇವರ ಪಾತ್ರದ ಬಗ್ಗೆ ಇನ್ನೂ ರಿವೀಲ್ ಆಗಿಲ್ಲ. ಸದ್ಯ ಭಾರ್ಗವಿ ಮತ್ತು ಅರ್ಜುನ್ ನಡುವೆ ವಿರಸ ಮೂಡಿರುವುದರಿಂದ ಅರ್ಜುನ್ ಗೆ ಹತ್ತಿರವಾಗುವ ಪಾತ್ರದಲ್ಲಿ ಸ್ಪಂದನಾ ನಟಿಸುತ್ತಾರೆಯೇ? ಎನ್ನುವ ಸಂಶಯ ಕೂಡ ಇದೆ. ಅಷ್ಟಕ್ಕೂ ಸ್ಪಂದನಾ ಎಂಟ್ರಿ ಹೇಗಿರುತ್ತೆ ಕಾದು ನೋಡಬೇಕು.

Source link

Leave a Reply

Your email address will not be published. Required fields are marked *