
ದರ್ಶನ್ ಗಜ ಸಿನಿಮಾದ ನಟಿ ನವ್ಯಾ ನಾಯರ್. 2002ರಲ್ಲಿ ರಂಜಿತ್ ನಿರ್ದೇಶನದ ‘ನಂದನಂ’ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನವ್ಯಾ, ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಪಾತಿರಾತ್ರಿ’ ಅವರ ನಟನೆಯ ಕೊನೆಯ ಚಿತ್ರ.
ದರ್ಶನ್ ಗಜ ಸಿನಿಮಾದ ನಟಿ ನವ್ಯಾ ನಾಯರ್ ಇತ್ತೀಚೆಗೆ ತಮ್ಮ ವಿಷು ಹಬ್ಬದ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ, ಅವರ ಅತ್ತೆ ತೀರಿಕೊಂಡು ಒಂದು ತಿಂಗಳಾಗುವ ಮುನ್ನವೇ ಹಬ್ಬ ಆಚರಿಸಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಪ್ರದಾಯದ ಪ್ರಕಾರ ಒಂದು ವರ್ಷ ಶ್ರಾದ್ಧ ಆಚರಿಸಬೇಕು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಆಕೆಯ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ನವ್ಯಾ ಪರ ನಿಂತಿದ್ದಾರೆ.
ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ನವ್ಯಾ ನಾಯರ್. 2002ರಲ್ಲಿ ರಂಜಿತ್ ನಿರ್ದೇಶನದ ‘ನಂದನಂ’ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನವ್ಯಾ, ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಮದುವೆಯ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಅವರು, ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ ‘ಪಾತಿರಾತ್ರಿ’ ಅವರ ನಟನೆಯ ಕೊನೆಯ ಚಿತ್ರ. ಇತ್ತೀಚೆಗಷ್ಟೇ ನವ್ಯಾ ನಾಯರ್ ಅವರ ಪತಿಯ ತಾಯಿ ನಿಧನರಾಗಿದ್ದರು.
ಈ ಬಗ್ಗೆ ನವ್ಯಾ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. “ಅತ್ತೆ ನನ್ನನ್ನು ಸೊಸೆಯಾಗಿ ನೋಡಲಿಲ್ಲ, ಮಗಳಂತೆ ಪ್ರೀತಿಸಿದರು. ನನ್ನ ಡ್ಯಾನ್ಸ್ ಅಂದರೆ ಅವರಿಗೆ ತುಂಬಾ ಇಷ್ಟ. ಕೊನೆಯದಾಗಿ ಮಾತಂಗಿ ಫೆಸ್ಟಿವಲ್‌ನಲ್ಲಿ ನನ್ನ ಪೂರ್ತಿ ಕಾರ್ಯಕ್ರಮವನ್ನು ನೋಡಿದ್ದರು” ಎಂದು ನವ್ಯಾ ಬರೆದುಕೊಂಡಿದ್ದರು. ಆದರೆ, ಮೊನ್ನೆ ವಿಷು ಹಬ್ಬದ ಚಿತ್ರಗಳನ್ನು ನವ್ಯಾ ಹಂಚಿಕೊಂಡಾಗ, ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.
“ಅತ್ತೆ ತೀರಿ ಹೋಗಿ ಒಂದು ತಿಂಗಳೂ ಆಗಿಲ್ಲ, ಆಗಲೇ ಇವರಿಗೆಲ್ಲಾ ಹಬ್ಬ ಬೇಕಾ?”, “ಆ ಮಗುವಿನ ಅಜ್ಜಿ ತಾನೇ ಮೊನ್ನೆ ತೀರಿಕೊಂಡಿದ್ದು, ಅಷ್ಟರಲ್ಲೇ ಸಂಭ್ರಮನಾ?”, “ನಮ್ಮ ಸಂಪ್ರದಾಯದ ಪ್ರಕಾರ, ಮನೆಯಲ್ಲಿ ಸೂತಕವಿದ್ದಾಗ ಒಂದು ವರ್ಷ ಯಾವುದೇ ಹಬ್ಬ ಆಚರಿಸುವುದಿಲ್ಲವಲ್ಲ?” ಎಂಬಂತಹ ಕಮೆಂಟ್‌ಗಳು ಫೋಟೋಗಳ ಕೆಳಗೆ ಬಂದಿವೆ.
ಟೀಕಾಕಾರರಿಗೆ ತಿರುಗೇಟು
ಆದರೆ, ಸಾಕಷ್ಟು ಮಂದಿ ನವ್ಯಾ ನಾಯರ್ ಬೆಂಬಲಕ್ಕೆ ನಿಂತಿದ್ದಾರೆ. “ಬೇರೆಯವರ ಖುಷಿ ನೋಡಿ ನಿಮಗೇಕೆ ಹೊಟ್ಟೆಯುರಿ?”, “ಯಾರಾದರೂ ತೀರಿಕೊಂಡರೆ ಜೀವನ ಪೂರ್ತಿ ದುಃಖಿಸುತ್ತಾ ಕೂರಬೇಕಾ?”, “ಊರವರ ಚಿಂತೆ ಬಿಟ್ಟು ನಿಮ್ಮ ಕೆಲಸ ನೋಡಿಕೊಳ್ಳಿ” ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಹೀಗೆ ನವ್ಯಾ ಹಂಚಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿವೆ.