
ಅಷ್ಟಕ್ಕೂ ಏನಿದು ಗುಡ್ನ್ಯೂಸ್ ಅಂತ ಕೇಳ್ತೀರಾ. ಅಂಥದ್ದೇನೂ ಇಲ್ಲ. ಚಿನ್ನದ ಮಳಿಗೆಯೊಂದರ ಪ್ರಚಾರಕ್ಕಾಗಿ ಇದಾಗಲೇ ಹಲವಾರು ಸೆಲೆಬ್ರಿಟಿಗಳು ಬಂದಿದ್ದು, ಅದೇ ರೀತಿ ಸೂರಜ್ ಮತ್ತು ರಾಶಿಕಾ ಶೆಟ್ಟಿಯನ್ನು ಪ್ರೊಮೋಷನ್ಗಾಗಿ ಕರೆಸಲಾಗಿದೆ. ಸೆಲೆಬ್ರಿಟಿಗಳು ಚಿನ್ನ ಖರೀದಿ ಮಾಡಿದಂತೆ ತೋರಿಸಿದರೆ, ಜನರು ಆಕರ್ಷಿತರಾಗಿ ಖರೀದಿ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೀಗೆ ಚಿನ್ನ ಖರೀದಿ ಮಾಡಿದಂತೆ ತೋರಿಸಲಾಗುತ್ತದೆ ಅಷ್ಟೇ. ಹಿಂದೆ ಬಿಗ್ಬಾಸ್ ವಿನ್ನರ್ ಗಿಲ್ಲಿನಟನಿಗೆ ಕೆಜಿಗಟ್ಟಲೆ ಚಿನ್ನ ಹಾಕಿದಾಗ, ಅದನ್ನು ಅವರು ವಾಪಸ್ ಮಾಡಿರಲಿಲ್ಲವೆ, ಇದೂ ಕೂಡ ಹಾಗೆನೇ.