ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಪ್ರಾರಂಭವಾಗಲಿರುವ ಟಿ20 ರಿಂದ 20 ತಂಡಗಳು ಫೈನಲ್ ಆಗಿವೆ. ಈ ಇಪ್ಪತ್ತು ತಂಡಗಳಲ್ಲಿ 2 ತಂಡಗಳು ಆತಿಥ್ಯ ರಾಷ್ಟ್ರದ ಅಡಿಯಲ್ಲಿ ಅರ್ಹತೆ ಪಡೆದರೆ, ಇನ್ನುಳಿದ 10 ತಂಡಗಳು ಟಿ20 ರ್ಯಾಂಕಿಂಗ್ ಮೂಲಕ ಆಯ್ಕೆಯಾಗಿದೆ. ಇನ್ನುಳಿದ 8 ತಂಡಗಳು ಅರ್ಹತಾ ಸುತ್ತಿನ ಮೂಲಕ T20 ಗೆ ಅರ್ಹತೆ ಇದೆ.
ಇಲ್ಲಿ ಅರ್ಹತಾ ಸುತ್ತಿನ ಮೂಲಕ ಕ್ವಾಲಿಫೈ ಆಗಿರುವ ತಂಡಗಳೆಂದರೆ ನೇಪಾಳ, ಒಮಾನ್, ಕೆನಡಾ, ಇಟಲಿ, ನಮೀಬಿಯಾ, ಜಿಂಬಾಬ್ವೆ, ಯುಇ ಮತ್ತು ನೆದರ್ಲ್ಯಾಂಡ್ಸ್. ಅಮೆರಿಕ ಪ್ರಾದೇಶಿಕ ಅರ್ಹತಾ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮೂಲಕ ಈ ಮುಂಬರುವ ಟಿ20 ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಇನ್ನು ಯುರೋಪ್ ಪ್ರಾದೇಶಿಕ ಅರ್ಹತಾ ಸುತ್ತಿನಲ್ಲಿ ಪಂದ್ಯಗಳಲ್ಲಿ ನೆದರ್ಲೆಂಡ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ T20 ಗೆ ಅರ್ಹತೆ ಇದೆ. ಈ ಮೂಲಕ ಬ್ಯಾಕ್ಟು ಬ್ಯಾಕ್ ಟಿ20 ನೆಗೆ ಅರ್ಹತೆ ಪಡೆಯುವಲ್ಲಿ ದರ್ಲೆಂಡ್ಸ್ ಪಡೆ ಯಶಸ್ವಿಯಾಗಿದೆ.
ಅತ್ತ ಸ್ಕಾಟ್ಲೆಂಡ್ ತಂಡವನ್ನು ಬಗ್ಗು ಬಡಿಯುವ ಮೂಲಕ ಈ ಬಾರಿ ಇಟಲಿ ತಂಡ ಟಿ20 ಗೆ ಎಂಟ್ರಿ ಕೊಟ್ಟಿದೆ. ವಿಶೇಷ ಎಂದರೆ ಕಳೆದ ಬಾರಿ ಸ್ಕಾಟ್ಲೆಂಡ್ ಟಿ20 ಆಡಿತ್ತು. ಆದರೆ ಈ ಬಾರಿ ಸ್ಕಾಟಿಶ್ ಪಡೆಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಯುರೋಪ್ನಿಂದ ಇಟಲಿ ತಂಡ ಟಿ20 ಗೆ ಅರ್ಹತೆ ಪಡೆದಿದೆ.
ಇನ್ನು ಆಫ್ರಿಕಾ ಅರ್ಹತಾ ಸುತ್ತಿನ ಪ್ರದರ್ಶನದ ಮೂಲಕ ನಮೀಬಿಯಾ ಹಾಗೂ ಝಿಂಬಾಬ್ವೆ ತಂಡಗಳು ಟಿ20 ಗೆ ಅರ್ಹತೆ ಪಡೆದಿದೆ. ಅದರಂತೆ ಮುಂಬರುವ ಟಿ20 ನಲ್ಲಿ ಝಿಂಬಾಬ್ವೆ ಹಾಗೂ ನಮೀಬಿಯಾ ತಂಡಗಳು ಕಾಣಿಸಿಕೊಳ್ಳಲಿವೆ.
ಇದರ ಜೊತೆಗೆ ಏಷ್ಯಾ/ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಸುತ್ತಿನ ಮೂಲಕ ನೇಪಾಳ, ಯುಇಐ ಮತ್ತು ಒಮಾನ್ ತಂಡಗಳು ಕೂಡ ಟಿ20 ಅರ್ಹತೆಗೆ ಪ್ರವೇಶ ಪಡೆದಿದೆ. ಅದರಂತೆ ಮುಂಬರುವ ಟಿ20 ನಲ್ಲಿ ಕಣಕ್ಕಿಳಿಯಲಿರುವ 20 ತಂಡಗಳು ಈ ಕೆಳಗಿನಂತಿವೆ…
ಭಾರತ, ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಯುಎಸ್ಎ, ಕೆನಡಾ, ನೆದರ್ಲ್ಯಾಂಡ್ಸ್, ಇಟಲಿ, ನಮೀಬಿಯಾ, ಜಿಂಬಾಬ್ವೆ, ನೇಪಾಳ, ಒಮಾನ್ ಮತ್ತು ಯುಎಇ.






