Headlines

ನೀವಂದುಕೊಂಡತಿಲ್ಲ ‘ಟಾಕ್ಸಿಕ್’, ಕಾಣುವುದೇ ಒಂದು, ಇರುವುದೇ ಒಂದು ಎಂದ ಯಶ್

ನೀವಂದುಕೊಂಡತಿಲ್ಲ ‘ಟಾಕ್ಸಿಕ್’, ಕಾಣುವುದೇ ಒಂದು, ಇರುವುದೇ ಒಂದು ಎಂದ ಯಶ್


ಯಶ್ (ಯಶ್) ನಟನೆಯ ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಮಾರ್ಚ್ 19ರಂದೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಯುದ್ಧ ಭೀತಿಯ ಕಾರಣ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಜೂನ್ 04 ರಂದು ಅದ್ಧೂರಿಯಾಗಿ ‘ಟಾಕ್ಸಿಕ್’ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಸಿನಿಮಾದ ಪ್ರಚಾರವನ್ನು ಸಕ್ರಿಯವಾಗಿ ಯಶ್ ಇನ್ನೂ ಪ್ರಾರಂಭಿಸಿಲ್ಲವಾದರೂ, ಇದೀಗ ಲಾಸ್ ಏಂಜಲ್ಸ್ ನಲ್ಲಿ ನಡೆದ ಸಿನಿಮಾಕಾನ್ 2026 ರಲ್ಲಿ ‘ರಾಮಾಯಣ’ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿ, ಅಲ್ಲಿಯೇ ‘ಟಾಕ್ಸಿಕ್’ ಸಿನಿಮಾದ ಬಗ್ಗೆಯೂ ಅಪರೂಪದ ವಿಷಯಗಳನ್ನು ಯಶ್ ಹಂಚಿಕೊಂಡಿದ್ದಾರೆ.

ಹಾಲಿವುಡ್ನ ಫ್ಯಾಂಡಾಂಗೋ ಮತ್ತು ರೋಟನ್ ಜೊತೆಗೆ ಮಾತನಾಡಿರುವ ನಟ ಯಶ್, ‘ರಾಮಾಯಣ’ ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಟಾಕ್ಸಿಕ್’ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ. ‘ಟಾಕ್ಸಿಕ್’ ಬಹಳ ಮಹಾತ್ವಾಕಾಂಕ್ಷೆಯ ಸಿನಿಮಾ. ಮೊದಲ ಬಾರಿಗೆ ನಾವು ಆ ಸಿನಿಮಾವನ್ನು ಭಾರತೀಯ ಭಾಷೆಯ ಜೊತೆಗೆ ಇಂಗ್ಲಿಷ್ ನಲ್ಲೂ ಚಿತ್ರೀಕರಿಸಿದ್ದೇವೆ.

‘ಸಿನಿಮಾದ ವಸ್ತು ವಿಷಯದ ಬಗ್ಗೆ ಹೇಳುವುದಾದರೆ ಹಲವು ಪದರಗಳನ್ನು ಒಳಗೊಂಡಿರುವ ಸೂಕ್ಷ್ಮವಾದ ಕಥೆ ‘ಟಾಕ್ಸಿಕ್’ ಹೊಂದಿದೆ. ಮೇಲ್ನೋಟಕ್ಕೆ ಗ್ಯಾಂಗ್‌ಸ್ಟರ್ ಎನಿಸಬಹುದಾದರೂ ಅದು ಬೇರೆಯದ್ದೇ ಅಂಶವನ್ನು ಒಳಗೊಂಡಿದೆ. ಮೇಲ್ನೋಟಕ್ಕೆ ಹಿಂಸಾತ್ಮಕ, ಆಕ್ಷನ್ ಸಿನಿಮಾ ಎನಿಸಿದರೂ ಸಹ ಅದು ಒಂದು ಸೈಕಾಲಜಿಕಲ್ ಥ್ರಿಲ್ಲರ್ ಸಹ ಆಗಿದೆ. ಜೊತೆಗೆ ಮಾನವೀಯ ಅಂಶಗಳು ಸಾರುವ ಕತೆಯನ್ನು ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:ರಣ್ ಬೀರ್ ಕಪೂರ್ ಜೊತೆ ನಟನೆ, ಯಶ್ ಹೇಳಿದ್ದೇನು?

‘ಟಾಕ್ಸಿಕ್’ ಸಿನಿಮಾ ಒಂದು ಡಾರ್ಕ್ ಅಥವಾ ಋಣಾತ್ಮಕ ಪಾತ್ರವನ್ನು ಬಹಳ ಭಿನ್ನ ರೀತಿಯಲ್ಲಿ ಪ್ರೆಸೆಂಟ್ ಮಾಡುವ ಸಿನಿಮಾ. ಕೆಲವು ಅದ್ಭುತವಾದ ತಂತ್ರಜ್ಞರು ಆ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ನನ್ನ ನಿರ್ದೇಶಕಿ ಗೀತು ಮೋಹನ್‌ದಾಸ್, ಗ್ಯಾಂಗ್‌ಸ್ಟರ್ ಸಿನಿಮಾವನ್ನು ಸಂಪೂರ್ಣ ಭಿನ್ನ ದೃಷ್ಟಿಕೋನದಿಂದ ಕಟ್ಟಿಕೊಟ್ಟಿದ್ದಾರೆ. ನಾನಂತೂ ಆ ಸಿನಿಮಾದಲ್ಲಿ ನಟಿಸುವುದನ್ನು ಎಂಜಾಯ್ ಮಾಡಿದ್ದೇನೆ. ಸಿನಿಮಾ ಕಣ್ಣಿಗೆ ಹಬ್ಬವೇ ಆಗಲಿದೆ. ಜೊತೆಗೆ ಸಿನಿಮಾ ನೋಡುವ ಮನಸ್ಸಿನ ಮೇಲೂ ಸಹ ಪರಿಣಾಮ ಆ ಸಿನಿಮಾ ಬೀರಲಿದೆ’ ವಾತಾವರಣ ಯಶ್.

ಇದೀಗ ಬಿಡುಗಡೆ ಆಗಿರುವ ಟೀಸರ್‌ಗಳಲ್ಲಿ ಹಿಂಸಾಚಾರ, ಇನ್ನೊಂದಕ್ಕೆ ಹೆಚ್ಚು ಒತ್ತು ನೀಡುವಂತೆ ಕಾಣಿಸುತ್ತಿದೆ. ಆದರೆ ಯಶ್ ಅವರು ಇದೀಗ ಹೇಳುವಂತೆ ಅದೆಲ್ಲ ಮೇಲ್ನೋಟದ ಕತೆಯಷ್ಟೆ. ಕತೆಯ ಅಂತರಾಳ ಬೇರೆಯೇ ಇದೆ. ಗೀತು ಮೋಹನ್ ದಾಸ್ ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳಲ್ಲಿ ಮಾನವೀಯ ಅಂಶಗಳಿಗೆ ಹೆಚ್ಚು ಒತ್ತು ನೀಡಿದ್ದರು. ಅದರಂತೆ ಈ ಸಿನಿಮಾದಲ್ಲಿಯೂ ಇರುವುದು ಖಾತ್ರಿ ಆಗಿದೆ. ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *