18

Image Credit : Instagram
ಬಿಗ್ಬಾಸ್ ಎಲಿಮಿನೇಷನ್ ಶಾಕ್
ಬಿಗ್ಬಾಸ್ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದ ಆ್ಯಂಕರ್ ಜಾಹ್ನವಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದಿರುವ ಕಾರಣ, ಹಲವಾರು ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ತಾವೇ ಫೈನಲಿಸ್ಟ್ ಆಗಲು ಸೂಕ್ತ ಸ್ಪರ್ಧಿಯಾಗಿತ್ತು ಎಂದು ಈಗಲೂ ಅಂದುಕೊಂಡಿರುವ ಜಾಹ್ನವಿ ಅವರಿಗೆ ಎಲಿಮಿನೇಷನ್ ಶಾಕ್ ಕೊಟ್ಟಿದೆ.
28
Image Credit : Social Media
ವೀಕ್ಷಕರ ಅಸಮಾಧಾನ
ಅಷ್ಟಕ್ಕೂ ಜಾಹ್ನವಿ (Bigg Boss Jhanvi) ಅವರು ಬಿಗ್ಬಾಸ್ ಮನೆಯಲ್ಲಿ ಇದ್ದಾಗ ಕೆಲವು ಕಾರಣಗಳಿಂದ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದ್ದು ಇದೆ. ಮಧ್ಯರಾತ್ರಿ ಗೆಜ್ಜೆ ಶಬ್ದ ಮಾಡುವ ಮೂಲಕ ರಕ್ಷಿತಾ ಶೆಟ್ಟಿಗೆ ತೊಂದರೆ ಕೊಟ್ಟಿದ್ದು ಒಂದಾದರೆ, ಅದಕ್ಕಿಂತಲೂ ಅವರಿಗೆ ಉಲ್ಟಾ ಹೊಡೆದದ್ದು ಸ್ಪಂದನಾ ಸೋಮಣ್ಣ ಅವರ ವಿಷಯದಲ್ಲಿ.
38
Image Credit : Asianet News
ನೆಟ್ಟಿಗರ ಟೀಕೆ
ಇದೀಗ ಬಿಗ್ಬಾಸ್ ರಕ್ಷಿತಾ ಶೆಟ್ಟಿ (Bigg Boss Rakshita Shetty) ಸೇರಿದಂತೆ ಕೆಲವು ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದು, ನೆಟ್ಟಿಗರಿಂದ ಭಾರಿ ಟೀಕೆಗಳೂ ಕೇಳಿಬರುತ್ತಿವೆ.
48
Image Credit : Instagram
ತುಘಲಕ್ ದರ್ಬಾರ್ ಇದ್ದಂಗೆ
ಬಿಗ್ಬಾಸ್ ಮನೆಯಲ್ಲಿ ಏನೇನೋ ಆಗತ್ತೆ. ಬಿಗ್ಬಾಸ್ ಮನೆಯಲ್ಲಿ ಇರುವಾಗಲೇ ಹೊರಗೆ ಏನಾಗ್ತಿತ್ತು ಎನ್ನುವುದು ನನಗೆ ತಿಳಿದಿತ್ತು. ಹೊರಗೆ ವೀಕ್ಷಕರಿಗೆ ತೋರಿಸೋದು ಒಂದೂವರೆ ಗಂಟೆ ಮಾತ್ರ. ಅದೊಂದು ರೀತಿಯ ತುಘಲಕ್ ದರ್ಬಾರ್ ಇದ್ದ ಹಾಗೆ ಎಂದು ರೆಡ್ ಎಫ್ಎಂ ಗೆ ನೀಡಿರುವ ಸಂದರ್ಶನದಲ್ಲಿ ಜಾಹ್ನವಿ (Bigg Boss Jhanvi) ಹೇಳಿದ್ದಾರೆ.
58
Image Credit : Instagram
ರಕ್ಷಿತಾ ಎಂದ್ರೆ ಇರಿಟೇಟ್
ಆ ಹುಡುಗಿ ಎಂದ್ರೆ ನನಗೆ ಇರಿಟೇಟ್. ಈಗಲೂ ರಕ್ಷಿತಾ ಶೆಟ್ಟಿ ಎಂದ್ರೆ ನನಗೆ ಇಷ್ಟವಿಲ್ಲ ಎನ್ನುತ್ತಲೇ ತಪ್ಪು ತಪ್ಪು ಮಾತನಾಡಿ, ಹಾಡು ಹೇಳಿ ವೈರಲ್ ಆಗುವವರು ಹೆಚ್ಚಾಗ್ತಿದ್ದಾರೆ. ಅವರಿಗೆ ಟೇಪ್ ಕಟಿಂಗ್ಗೂ ಕರೀತಾರೆ, ಮೀಡಿಯಾದವರು ಮೈಕೂ ಹಿಡೀತಾರೆ, ಅವರ ಸಾಧನೆ ಏನು? ನಾವೆಷ್ಟು ಸಾಧನೆ ಮಾಡಿ ಮೇಲೆ ಬಂದವರು ಎಂದು ರಕ್ಷಿತಾ ಶೆಟ್ಟಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಜಾಹ್ನವಿ.
68
Image Credit : Instagram
ಹೂವಿನ ಬಾಣದಂತೆ ಹುಡುಗಿಗೆ ಹೋಲಿಕೆ!
ಹೂವಿನ ಬಾಣದಂತೆ ಹುಡುಗಿಗೆ ರಕ್ಷಿತಾ ಶೆಟ್ಟಿ ಅವರನ್ನು ಹೋಲಿಕೆ ಮಾಡಿರುವುದು ಇದರಿಂದ ಸ್ಪಷ್ಟವಾಗಿದೆ. ಅದೇ ವೇಳೆ ಅಲ್ಲಿಯೇ ಸ್ಪಷ್ಟನೆಯನ್ನೂ ನೀಡಿದ ಜಾಹ್ನವಿ, ರಕ್ಷಿತಾ ಶೆಟ್ಟಿ ಬಿಡಿ ತನ್ನ ಯುಟ್ಯೂಬ್ಗೆ ಏನೇನು ಬೇಕೋ ಅದನ್ನು ಮಾಡ್ತಾಳೆ. ಕಷ್ಟಪಟ್ಟು ಏನೇನೋ ಕಂಟೆಂಟ್ ಮಾಡ್ತಾಳೆ ಎಂದೂ ಹೇಳಿದ್ದಾರೆ.
78
Image Credit : Instagram
ರಕ್ಷಿತಾ ಕಂಡ್ರೆ ಹೊಟ್ಟೆ ಉರಿ
ಇದೇ ವೇಳೆ ರಕ್ಷಿತಾ ಶೆಟ್ಟಿ ಮಂಗಳೂರಿನವಳು. ಅವಳಿಗೆ ಇರುವ ಖ್ಯಾತಿ ನೋಡಿದ್ರೆ ನನಗೆ ಹೊಟ್ಟೆ ಉರಿಯಾಗುತ್ತದೆ. ನಾನೂ ಅಲ್ಲೇ ಹುಟ್ಟಿದ್ರೆ ನನ್ನನ್ನೂ ಜನ ಇಷ್ಟಪಡುವವರೇನೋ ಎಂದಿದ್ದಾರೆ!
88
Image Credit : Instagram
ಟ್ರಿಗರ್ ಮಾಡಲು
ರಜತ್ ಮತ್ತು ಚೈತ್ರಾ ಕುಂದಾಪುರ ಅವರನ್ನು ಕರೆಸಿದ್ದೇ ಅಶ್ವಿನಿ ಗೌಡ ಅವರನ್ನು ಟ್ರಿಗರ್ ಮಾಡಲು ಎಂದೂ ಈ ಸಂದರ್ಭದಲ್ಲಿ ಜಾಹ್ನವಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.