16

Image Credit : Jyotiraditya M. Scindia @JM_Scindia x
ಜೆನ್‌ಝೀ ಆಕರ್ಷಿಸಲು ಹೊಸ ಪ್ಲಾನ್
ಈಗಿನ ಜೆನ್‌ಝಿ ಸಮೂಹ ಏನಿದ್ದರೂ ಆನ್‌ಲೈನ್ ಕೆಲಸ ಕಾರ್ಯ ಮುಗಿಸಿ ಬಿಡುತ್ತದೆ. ಶಾಪಿಂಗ್ ಅದರೂ ಸರಿ ಬ್ಯಾಂಕಿಂಗ್ ಆದರೂ ಸರಿ. ಬಹುತೇಕ ಜೆನ್‌ಝಿ ಯುಪಿಐ ಮೂಲಕವೇ ಎಲ್ಲಾ ಬ್ಯಾಂಕಿಂಗ್ ವ್ಯವಹಾರ ಮುಗಿಸುತ್ತಾರೆ.ಬ್ಯಾಂಕ್ ಶಾಖೆಗೆ ತೆರಳಿ ವ್ಯಹಾರ ಮಾಡುವುದು ಗೊತ್ತೇ ಇರುವುದಿಲ್ಲ. ಇದೀಗ ಜೆನ್‌ಝಿ ಸಮೂಹವನ್ನು ಆಕರ್ಷಿಸಲು ಪೋಸ್ಟ್ ಆಫೀಸ್ ಜೆನ್‌ಝೀ ಅಂಚೆ ಕಚೇರಿ ತರೆದಿದೆ.
26
Image Credit : Jyotiraditya M. Scindia @JM_Scindia x
ಕೇರಳದ ಮೊದಲ ಜೆನ್‌ಝಿ ಪೋಸ್ಟ್ ಆಫೀಸ್
ಕೇರಳದ ಕೊಟಾಯಂನಲ್ಲಿ ಪೋಸ್ಟ್ ಆಫೀಸ್ ಹೊಸ ಶಾಖೆ ತೆರೆದಿದೆ. ಇದು ಜೆನ್‌ಝೀ ಸಮೂಹಕ್ಕಾಗಿ ತೆರೆದಿರುವ ಪೋಸ್ಟ್ ಆಫೀಸ್. ಇಲ್ಲಿ ಬಹುತೇಕ ಕಾರ್ಯಗಳು ಡಿಜಿಟಲಿ ಮಾಡಲಾಗುತ್ತದೆ. ಇದಕ್ಕಾಗಿ ಕ್ಯೂಆರ್ ಕೋಡ್ ವ್ಯವಸ್ಥೆಗಳು ಸೇರಿದಂತೆ ಹಲವು ಡಿಜಿಟಲೈಸ್ ಮಾಡಲಾಗಿದೆ.
36
Image Credit : Jyotiraditya M. Scindia @JM_Scindia x
ಜೆನ್‌ಝಿ ಪೋಸ್ಟ್ ಅಫೀಸ್ ವಿಶೇಷತೆ
ಕೊಟಾಯಂ ಸಿಎಂಸ್ ಕಾಲೇಜಿನಲ್ಲಿ ಕೊಟಾಯಂ ಮುಖ್ಯ ಬ್ರಾಂಚ್‌ನ ಇದೀಗ ಜೆನ್‌ಝಿ ಪೋಸ್ಟ್ ಅಫೀಸ್ ತೆರೆದಿದೆ. ಹಲವು ಸೌಲಭ್ಯಗಳು ಈ ಪೋಸ್ಟ್ ಆಫೀಸ್ ಕಚೇರಿಯಲ್ಲಿದೆ. ಜೆನ್‌ಝಿ ಸಮೂೂಹಕ್ಕೆ ಬೇಕಾದ ಲ್ಯಾಪ್‌ಟಾಪ್, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಗಳು ಇಲ್ಲಿವೆ. ಇನ್ನು ಕೆಲ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸವಿದ್ದರೂ ಮಾಡಲು ಕೌಂಟರ್ ನೀಡಲಾಗಿದೆ.
46
Image Credit : Jyotiraditya M. Scindia @JM_Scindia x
ಲೈಬ್ರರಿ ಫೆಸಿಲಿಟಿ
ಕಾಲೇಜು ಆವರಣದಲ್ಲಿರುವ ಈ ಜೆನ್‌ಝಿ ಪೋಸ್ಟ್ ಆಫೀಸ್‌ನಲ್ಲಿ ಓದಲು ಪುಸ್ತಕಗಳನ್ನು ಇಡಲಾಗಿದೆ. ಇಷ್ಟೇ ಅಲ್ಲ ಓದುವ ಹವ್ಯಾಸ ಹೆಚ್ಚಿಸಲು ಉತ್ತಮ ವಾತಾವರಣ ಕಲ್ಪಿಸಲಾಗಿದೆ. ಓದಲು ಚಿಕ್ಕ ಹಾಗೂ ಚೊಕ್ಕವಾದ ಸ್ಥಳ ನೀಡಲಾಗಿದೆ. ವಿದ್ಯಾರ್ಥಿಗಳು ಅಥವಾ ಜೆನ್‌ಝಿ ಸಮೂಹ ಈ ಪೋಸ್ಟ್‌ಆಫೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
56
Image Credit : Jyotiraditya M. Scindia @JM_Scindia x
ಕಾಲೇಜು ಸಹಯೋಗದಲ್ಲಿ ಜೆನ್‌ಝಿ ಪೋಸ್ಟ್ ಅಫೀಸ್
ಸಿಎಂಎಸ್ ಕಾಲೇಜು ಸಹಯೋಗದಲ್ಲಿ ಭಾರತೀಯ ಅಂಚೆ ಇಲಾಖೆ ಈ ಜೆನ್‌ಜಿ ಪೋಸ್ಟ್ ಆಫೀಸ್ ತೆರೆದಿದೆ. ಈ ಫೋಸ್ಟ್ ಆಫೀಸ್‌ನಲ್ಲಿ ಇತರ ಸಾಮಾನ್ಯ ಪೋಸ್ಟ್ ಆಫೀಸ್‌ಗಳು ಹೇಗೆ ಕಾರ್ಯನಿರ್ವಹಿಸುತ್ತದೆ, ಚೆಕ್ ವಿಥ್‌ಡ್ರಾ, ಡೆಪಾಸಿಟ್ ಸೇರಿದಂತೆ ಶಾಖೆಯಲ್ಲಿ ಗ್ರಾಹಕ ಯಾವ ರೀತಿ ತನ್ನ ಅಗತ್ಯತೆಗಳನ್ನು ಪೂರೈಸುವ ಕುರಿತು ಮಾಹಿತಿ ಇಡಲಾಗಿದೆ.
ಕಾಲೇಜು ಸಹಯೋಗದಲ್ಲಿ ಜೆನ್‌ಝಿ ಪೋಸ್ಟ್ ಅಫೀಸ್
66
Image Credit : Getty
ದೆಹಲಿ, ಆಂಧ್ರ ಬಳಿಕ ಇದೀಗ ಕೇರಳ
ಜೆನ್‌ಝಿ ಪೋಸ್ಟ್ ಆಫೀಸ್ ಕೇರಳದಲ್ಲೇ ಮೊದಲಲ್ಲ. ಇದಕ್ಕೂ ಮೊದಲು ದೆಹಲಿಯ ಐಐಟಿ ಕಾಲೇಜು, ಆಂಧ್ರ ಪ್ರದೇಶ ವಿಶ್ವವಿದ್ಯಾಲಯ ಕ್ಯಾಂಪಸ್ ಒಳಗಡೆ ಜೆನ್‌ಝಿ ಪೋಸ್ಟ್ ಆಫೀಸ್ ಕಾರ್ಯನಿರ್ವಹಿಸುತ್ತಿದೆ. ಈ ಪೋಸ್ಟ್ ಆಫೀಸ್‌ಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆ ಬಳಿಕ ಕೇರಳದಲ್ಲಿ ತೆರೆಯಲಾಗಿದೆ.
ದೆಹಲಿ, ಆಂಧ್ರ ಬಳಿಕ ಇದೀಗ ಕೇರಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ