ಡಾ ರಾಜ್​ಕುಮಾರ್ ಅದ್ಭುತ ವ್ಯಕ್ತಿತ್ವಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ

ಡಾ ರಾಜ್​ಕುಮಾರ್ ಅದ್ಭುತ ವ್ಯಕ್ತಿತ್ವಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ


ಡಾ ರಾಜ್ ಕುಮಾರ್ (Dr Rajkumar), ಕನ್ನಡಿಗರ ಪಾಲಿಗೆ ಕೇವಲ ನಟ ಮಾತ್ರವೇ ಅಲ್ಲ. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ. ಕರ್ನಾಟಕದ ಜನರ ಪಾಲಿಗೆ ಮನೆ ದೇವರು ಸಹ ಆಗಿಬಿಟ್ಟಿದ್ದಾರೆ. ಕನ್ನಡಿಗರು ಅಣ್ಣಾವ್ರನ್ನು ಜೀವಕ್ಕೆ ಹಚ್ಚಿಕೊಂಡಿರುವುದಕ್ಕೆ ಕೇವಲ ಅವರ ನಟನೆಯೊಂದೇ ಕಾರಣವಲ್ಲ. ಅವರಲ್ಲಿದ್ದ ಸರಳತೆ, ಮುಗ್ಧತೆ, ಅವರ ಒಳ್ಳೆಯತನ ಹೀಗೆ ಪಟ್ಟಿ ಉದ್ದ ಸಾಗುತ್ತದೆ. ಅಣ್ಣಾವ್ರ ಕುರಿತಾಗಿ ಹಲವಾರು ಮಂದಿ ತಮ್ಮ ಅನುಭವಕ್ಕೆ ಬಂದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಿರ್ದೇಶಕರು, ಚಿತ್ರರಂಗದ ಬಗ್ಗೆ ಹಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಬರುತ್ತಿರುವ ರಘುರಾಮ್ ಡಿಪಿ ಅವರು, ರಾಜ್ ಕುಮಾರ್ ಅವರ ಸರಳ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿ ಘಟನೆಯನ್ನು ಹಂಚಿಕೊಂಡಿದ್ದಾರೆ. ರಘುರಾಮ್ ಅವರ ಫೇಸ್ ಬುಕ್ ಪೋಸ್ಟ್ ನ ಯಥಾವತ್ ರೂಪ ಇಲ್ಲಿದೆ…

‘ಡಾ ರಾಜ್ ರನ್ನು ಶೂಟಿಂಗ್ ಗೆ ಹುಡುಕಿಕೊಂಡು ಹೋದ ಆ ಹೆಣ್ಣು ಮಗಳು ಯಾರು ?

ಒಂದು ಹಳ್ಳಿ, ಆ ಹಳ್ಳಿಯಲ್ಲಿ ಒಂದು ವಯಸ್ಸಾದ ಹೆಣ್ಣುಮಗಳು. ಆಕೆಗೆ ಅವರ ಮಗ ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದಿದ್ದಾರೆ ಅನ್ನೋ ವಿಷಯ ಗೊತ್ತಾಗಿದೆ. ಅವರ ಹಳ್ಳಿ ಬಿಳಿಗಿರಿರಂಗನ ಬೆಟ್ಟಕ್ಕೆ ಹತ್ತಿರ ಇದ್ದ ಜಾಗ. ಮಗನನ್ನು ನೋಡಬೇಕು ಅನ್ನೋ ಆತುರ ಕಾತುರ ಹಂಬಲ ಎಲ್ಲವೂ ಉಂಟಾಗಿದೆ. ಮಧ್ಯಾಹ್ನ ಸುಮಾರು 3:45 – 4:00 ಗಂಟೆಗೆ ಮಗನನ್ನು ನೋಡಲೇಬೇಕು ಎಂದು ತೀರ್ಮಾನಿಸಿ ಅವರ ಬಳಿ ಬಸ್ ಹತ್ತಿದೆ. ಆ ಬಸ್ಸು, ಮತ್ತೊಂದು ಹತ್ತಿರ ಬಂದು ನಿಂತಿದೆ. ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಬೇಕೆಂದರೆ ಇಲ್ಲಿಂದ ಇನ್ನೊಂದು ಬಸ್ಸನ್ನು ಹಿಡಿದು ಮುಂದಕ್ಕೆ ಸಾಗಬೇಕು. ಆಗ ಸಮಯ, ಸಂಜೆ ಸಿದ್ಧ ಸುಮಾರು 5:45.. ಸೂರ್ಯ ತನ್ನ ಕೆಲಸವನ್ನು ಮುಗಿಸಿ ತನ್ನ ಮನೆಯ ಕಡೆ ಹೊರಡಲು ಆಗಿದ್ದಾನೆ. ಬಸ್ ನಿಲ್ಲಿಸಿದ ಬಸ್ ನಿಲ್ದಾಣ ಅಲ್ಲ ಅಥವಾ ಯಾವುದೇ ಮಧ್ಯ ಭಾಗವೂ ಅಲ್ಲ. ಸುತ್ತಮುತ್ತಗುಡ್ಡ ಕಾಡು, ಬರಿ ಒಂದು ಬೆಟ್ಟದ ಅಂಗಡಿ ಮಾತ್ರ ಇದೆ. ಹತ್ತಿರ ಯಾವುದಾದರೂ ಹೋಗಬೇಕೆಂದರೆ 5-6 ಕಿ.ಮೀ ನಡೆಯಬೇಕಿತ್ತು.

ಆ ಅಜ್ಜಿ, ಹೆದರಿಕೆ , ಕೊಂಚ ಗಾಬರಿಯಿಂದಲೇ ಅಂಗಡಿಯವನ ಬಳಿ ಬಂದು ” ಏನಪ್ಪಾ! ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ಬಸ್ಸು ಎಷ್ಟು ಹೊತ್ತಿಗೆ ಬರುತ್ತೆ?” ಅಂತ ಕೇಳಿದ್ದಾರೆ. ಆಗ ಆ ಪೆಟ್ಟಿಗೆಯ ಅಂಗಡಿಯವ ” ಅಜ್ಜಿ ಬಸ್ ಬಂದ್ಬಿಟ್ಟೆ. ಇನ್ನು ನಾಳೆ ಬೆಳಗ್ಗೆನೇ ಬರೋದು ” ಅಂತ ಹೇಳಿದಾಗ ಅಜ್ಜಿ ಮುಖದ ಮೇಲೆ ಗಾಬರಿ ಜಾಸ್ತಿ ಆದದ್ದನ್ನು ಗಮನಿಸಿ ” ಏನು ಯೋಚನೆ ಮಾಡ್ಬೇಡಿ ಅಜ್ಜಿ. ಬಿಳಿಗಿರಿರಂಗನ ಬೆಟ್ಟದಲ್ಲಿ ಅಜ್ಜಿ ಬಸ್ಸಿಂದ ಬಂದು ಇಳಿದಾಗ ಜನಜಾತ್ರೆ. ಅಲ್ಲಿ ಯಾವುದೇ ದೇವರ ಉತ್ಸವ ನಡೆದಿರಲಿಲ್ಲ. ಅಭಿಮಾನಿ ದೇವರುಗಳ ದೇವರು ವರ ನಟ ಡಾ ರಾಜ್ ಕುಮಾರ್ ಅವರ ಒಂದು ಚಿತ್ರದ ಚಿತ್ರಗಳು ನಡೀತಿತ್ತು. ಅಣ್ಣಾವ್ರನ್ನು ನೋಡಲು ಜನಸಾಗರವೇ ಹರಿದುಬಂದಿತ್ತು. ಆ ಜಾತ್ರೆಯಲ್ಲಿ ಅಜ್ಜಿ ನುಗ್ಗಿ ಮುಂದೆ ಬಂದಿದ್ದಾರೆ. ಆಗ ಡಾ ರಾಜಕುಮಾರ್ ಅವರು ಮೇಕಪ್ ಮಾಡಿಸಿಕೊಳ್ಳುತ್ತಾರೆ. ಕನ್ನಡಿಯಿಂದ ಹತ್ತಿರದ ಗುಂಪಿನಲ್ಲಿದ್ದ ಈ ವಯಸ್ಸಾದ ಹೆಣ್ಣುಮಕ್ಕಳನ್ನು ಗಮನಿಸಿದ ಡಾ ರಾಜಕುಮಾರ್ ಕನ್ನಡಿ ಅವರ ಮೇಕಪ್ ಮ್ಯಾನ್ ಕೈಲಿ ಕೊಟ್ಟು, ಬಹಳ ಆಶ್ಚರ್ಯದಿಂದ ಆ ಹೆಣ್ಣುಮಗಳ ಕಡೆ ತಿರುಗಿ ನೋಡಿ “ಅವ್ವೆ” ಎಂದು ಕೂಗಿ ಕರು ಹಸುವಿನ ಬಳಿ ಓಡಿದಂತೆ ಅಣ್ಣಾವ್ರು ಕೂಡ ಹೋಗಿದ್ದಾರೆ. ಆ ಹೆಣ್ಣುಮಗಳು ಬೇರೆ ಯಾರು ಅಲ್ಲ, ವರನಟ ಡಾ ರಾಜ್ ಕುಮಾರ್ ಅವರ ಹೆತ್ತ ತಾಯಿ, ಶ್ರೀಮತಿ ಲಕ್ಷ್ಮಮ್ಮ ಅವರು. ಅಮ್ಮನನ್ನು ನೋಡಿ ಸಂತೋಷದಿಂದ ಬಾಚಿ ತಬ್ಬಿಕೊಂಡು ” ಅವ್ವ!!ಹೇಗೆ ಬಂದೆ ಯಾರು ಕರ್ಕೊಂಡ್ ಬಂದ್ರು ” ಎಂದು ಪ್ರಶ್ನೆಗಳನ್ನು ಕೇಳಿದಾಗ ಲಕ್ಷ್ಮಮ್ಮನವರು ನಡೆದ ಘಟನೆಗಳನ್ನೆಲ್ಲ ವಿವರಿಸಿದ್ದಾರೆ.

ಇದನ್ನೆಲ್ಲ ಕೇಳಿಸಿಕೊಂಡ ನಂತರ ಅಣ್ಣಾವ್ರು ಸಿನಿಮಾ ಪ್ರೊಡಕ್ಷನ್ ನಲ್ಲಿ ಒಬ್ಬ ಹುಡುಗನನ್ನು ಕರೆದು, ಕಿವಿಯಲ್ಲಿ ಏನೋ ಹೇಳಿದ್ದಾರೆ. ನಂತರ ಚಿತ್ರೀಕರಣದಲ್ಲಿ ಭಾಗವಹಿಸಿ, ಸಂಜೆಯ ವೇಳೆ ಶೂಟಿಂಗ್ ಕಾರು ಹತ್ತಿದ್ದಾರೆ. ಆ ಕಾರು ಸೀದಾ ಅಜ್ಜಿ ಕಳೆದ ರಾತ್ರಿ ತಂಗಿದ್ದ ಅಂಗಡಿಯ ಬಳಿ ಬಂದು ನಿಂತಿದೆ. ಕಾರು ಇಂದ ಇಳಿಯುತ್ತಿದ್ದ ಅಜ್ಜಿಯನ್ನು ನೋಡಿ ಅಂಗಡಿಯವ ” ಏನ್ ಅಜ್ಜಿ!!ನಿನ್ನ ಮಗ ಅಷ್ಟು ದೊಡ್ಡ ವ್ಯಕ್ತಿ ನಾ? ಹೋಗ್ತಾ ಬಸ್ಸಲ್ಲಿ ಹೋದೆ ಈಗ ಕಾರಿನಲ್ಲಿ ಬಂದ್ಬಿಟ್ಟೀಯಾ ” ಎಂದು ಪ್ರಶ್ನಿಸಿದಾಗ ಕಾರಿನಿಂದ ಇಳಿದ ಅಭಿಮಾನಿಗಳ ಆರಾಧ್ಯ ದೈವ, ಕರ್ನಾಟಕ ರತ್ನ, ನಟಸಾರ್ವಭೌಮ, ರಾಜಕುಮಾರ್ ಅವರು ದಿಗ್ಭ್ರಾಂತರಾಗಿದ್ದಾರೆ. ಏನು ಮಾತಾಡಲು ತೋಚಲಿಲ್ಲ. ಕೆಲ ನಿಮಿಷ ಅಣ್ಣಾವ್ರನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದಾರೆ.

ನಂತರ ಅಪ್ಪಾಜಿ, ಅವರ ಬಳಿ ಹೋಗಿ, ಬಾಚಿ ಅವರನ್ನು ತಬ್ಬಿಕೊಂಡು ನಿಮಿಷ ಕಾಲ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ತದನಂತರ ಅಂಗಡಿಯವನ ಶರ್ಟ್ ಎಲ್ಲಾ ಒದ್ದೆಯಾಗಿದೆ. ಅಣ್ಣಾವ್ರ ಕಣ್ಣೀರಿನ ಹನಿಗಳು ಆತನ ಭುಜಭಾಗದ ಅಂಗಿಯನ್ನು ಒದ್ದೆ ಮಾಡಿತ್ತು. ಶೂಟಿಂಗ್ ನಲ್ಲಿ ಪ್ರೊಡಕ್ಷನ್ ಹುಡುಗನ ಬಳಿ ಕಿವಿಯಲ್ಲಿ ಅಣ್ಣಾವ್ರು ಹೇಳಿದ್ದು ಈ ಅಂಗಡಿ ಅವರಿಗೆ ಗೌರವಪೂರ್ವಕವಾಗಿ ಹಣ್ಣು-ಹಂಪಲು, ಸಿಹಿ ತಿಂಡಿಗಳು, ರೇಷ್ಮೆ ಪಂಚೆ ಇತ್ಯಾದಿಗಳ ವ್ಯವಸ್ಥೆ ಮಾಡಲಾಗಿತ್ತು. ಇವೆಲ್ಲವನ್ನೂ ಆತನಿಗೆ ಕೊಟ್ಟು ಹೃದಯಕವಾಗಿ ಕೃತಜ್ಞತೆಗಳನ್ನು ತಿಳಿಸಿ, ಆತನ ಜೇಬಿಗೆ ಒಂದಿಷ್ಟು ಹಣವನ್ನು ಕೊಟ್ಟಾಗ ಅಂಗಡಿಯ ವ್ಯಕ್ತಿಗೆ ಒಂದು ಮಾತು ಹೇಳಿದ್ರಂತೆ ” ಅಣ್ಣಾ! ದಯವಿಟ್ಟು ಬೇಡ ಅಣ್ಣ” ಎಂದು ಪ್ರೀತಿಯಿಂದ ಕೇಳಿದೆ. ಮತ್ತೊಮ್ಮೆ ಆತನನ್ನು ಅಣ್ಣಾವ್ರು ಬಿಗಿದಪ್ಪಿ ಶುಭಹಾರೈಸಿ ತಾಯಿಗೆ ಹೊರಟಿದ್ದಾರೆ. ಯಾರು ಯಾವಾಗ ಹೇಗೆ ನಮ್ಮ ಬದುಕಲ್ಲಿ ಬರ್ತಾರೆ ಅನ್ನೋದೇ ಯಕ್ಷ ಪ್ರಶ್ನೆ. ಹೀಗೆ ಸಿಕ್ಕಿದ ಬದುಕಿ ಗೊಬ್ಬ ಬಂಧು, ಡಾ ರಾಜ್ ಮರೆಯಲಿಲ್ಲ ಆತನನ್ನು ಎಂದೆಂದೂ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *