Headlines

ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’, ಬೆಂಗಳೂರಿನಲ್ಲಿ ‘ಮ್ಯಾನೇಜರ್’!; ಎರಡು ಹುದ್ದೆಗೂ ಒಂದೇ ಸಂಬಳ: ಈಗ ನಗರ ಮುಖ್ಯವೋ ಅಥವಾ ಹುದ್ದೆಯೋ?

ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’, ಬೆಂಗಳೂರಿನಲ್ಲಿ ‘ಮ್ಯಾನೇಜರ್’!; ಎರಡು ಹುದ್ದೆಗೂ ಒಂದೇ ಸಂಬಳ: ಈಗ ನಗರ ಮುಖ್ಯವೋ ಅಥವಾ ಹುದ್ದೆಯೋ?


ಬೆಂಗಳೂರು, ಏ.17: ಸೋಶಿಯಲ್ ಮೀಡಿಯಾದಲ್ಲಿ ಈ ಐಟಿ ಕಂಪನಿಗಳ ಉದ್ಯೋಗಿಗಳ ಗುರಿ ಮುಗಿಯುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಇಂತಹ ಪೋಸ್ಟ್‌ಗಳು ವೈರಲ್ ಆಗುತ್ತಿದೆ. ಸಾಫ್ಟ್ವೇರ್ ಮತ್ತು ಕಾರ್ಪೊರೇಟ್ ಲೋಕದಲ್ಲಿ ‘ಹುದ್ದೆಯ ಹೆಸರು’ (ಶೀರ್ಷಿಕೆ) ಮುಖ್ಯವೋ ಅಥವಾ ‘ವಾಸಿಸುವ ನಗರ’ (ಸ್ಥಳ) ಮುಖ್ಯವೋ? ರೆಡ್ಡಿಟ್ (Reddit) ಬಳಕೆದಾರರು ಹಂಚಿಕೊಂಡಿರುವ ಈ ಪೋಸ್ಟ್ ಈಗ ಐಟಿ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಎಂಟು ವರ್ಷಗಳ ಅನುಭವವಿರುವ ಅಭ್ಯರ್ಥಿಯೊಬ್ಬರು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ (MNC) ‘ಸೀನಿಯರ್ ಮ್ಯಾನೇಜರ್’ ಹುದ್ದೆಗೆ ಸಂದರ್ಶನ ನೀಡಿದ್ದರು. ಅಭ್ಯರ್ಥಿಯು ವೈಯಕ್ತಿಕ ಕಾರಣಗಳಿಂದ ಬೆಂಗಳೂರಿನಲ್ಲೇ ಇರಲು ಬಯಸಿದ್ದರು. ಆದರೆ, ಕಂಪನಿಯು ಅವರ ಮುಂದೆ ಎರಡು ವಿಚಿತ್ರ ಆಯ್ಕೆಗಳನ್ನು ಇಟ್ಟಿದೆ. ಒಂದು ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’ ಹುದ್ದೆ, ಎರಡನೇಯದ್ದು, ಬೆಂಗಳೂರಿನಲ್ಲೇ ಇರಬೇಕೆಂದರೆ ‘ಮ್ಯಾನೇಜರ್’ ಹುದ್ದೆ. ಈಗ ಈ ವ್ಯಕ್ತಿ ವಿಚಿತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಖಾಸಗಿ ಬಸ್ ಡಿಕ್ಕಿ ಯಾದಗಿರಿ (1)

ಎರಡೂ ಆಯ್ಕೆಗಳಲ್ಲಿ ಸಂಬಳ (CTC) ಒಮ್ಮೆ ಆಗಿರುತ್ತದೆ! ಕಂಪನಿಯ ಪ್ರಕಾರ, ಎರಡೂ ಕೆಲಸಗಳು ಒಂದೇ ರೀತಿಯದ್ದಾಗಿದ್ದರೂ, ಬೆಂಗಳೂರಿನಲ್ಲಿ ಸದ್ಯಕ್ಕೆ ಸೀನಿಯರ್ ಮ್ಯಾನೇಜ್ ಹುದ್ದೆಗಳು ಖಾಲಿ ಇಲ್ಲದ ಕಾರಣ ಈ ‘ಟೈಟಲ್ ಹಿಟ್’ (ಟೈಟಲ್ ಹಿಟ್) ಅನಿವಾರ್ಯ ಎಂದಿದೆ.ಈ ಗೊಂದಲಕ್ಕೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಪುಣೆಗೆ ಬರುತ್ತಿದೆ ‘ವಂದೇ ಭಾರತ್ ಸ್ಲೀಪರ್’: 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ!

“ಹೈದರಾಬಾದ್‌ಗೆ ತೆರಳುವುದು ಉತ್ತಮ. ಬೆಂಗಳೂರಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮುಂದಿನ ಹತ್ತು ವರ್ಷ ಅಲ್ಲಿ ಯಾವುದೇ ಭರವಸೆ ಇಲ್ಲ. ಉತ್ತಮ ಜೀವನ ಗುಣಮಟ್ಟಕ್ಕಾಗಿ ಹೈದರಾಬಾದ್ ಆಯ್ಕೆ ಮಾಡಿಕೊಳ್ಳಿ” ಎಂದು ಸಲಹೆ ನೀಡಿದರು. ಮುಂದಿನ ಕೆಲಸದ ಸಂದರ್ಶನಗಳಲ್ಲಿ ಹುದ್ದೆಯ ಹೆಸರು ಮುಖ್ಯವಾಗುತ್ತದೆ. ಒಂದು ವೇಳೆ ಬೆಂಗಳೂರನ್ನೇ ಆರಿಸಿಕೊಂಡರೆ, ಸಂಬಳ ಮತ್ತು ಜವಾಬ್ದಾರಿ ಒಂದೇ ಆಗಿದ್ದರೂ ಶೀರ್ಷಿಕೆ ಬದಲಾಗಿದೆ ಎಂಬ ಬಗ್ಗೆ ಕಂಪನಿಯಿಂದ ಲಿಖಿತ ದಾಖಲೆಯನ್ನು ಪಡೆದುಕೊಳ್ಳಿ” ಮಾತ್ರ. ಸಂಬಳ ಒಂದೇ ಇರುವಾಗ ನಿಮಗೆ ಇಷ್ಟವಾದ ನಗರದಲ್ಲೇ ಇರಿ” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವರು, “ಕೇವಲ 8 ವರ್ಷದ ಅನುಭವಕ್ಕೆ ಸೀನಿಯರ್ ಮ್ಯಾನೇಜರ್ ಹುದ್ದೆ ಸಿಗುತ್ತದೆಯೇ? ಮತ್ತು ಮ್ಯಾನೇಜರ್ ಆಗಿ ಒಬ್ಬರೇ ಕೆಲಸ ಮಾಡುವ (IC ಪಾತ್ರ) ಜವಾಬ್ದಾರಿ ಏಕೆ?” ಎಂಬ ಕುತೂಹಲಕಾರಿ ಪ್ರಶ್ನೆಗಳನ್ನು ಎತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *