ಲಿಯೋನೆಲ್ ಮೆಸ್ಸಿ 3 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಅವರು ಇಂದು ಕೋಲ್ಕತ್ತಾಗೆ ಆಗಮಿಸಿ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ. ಆದರೆ ಮೆಸ್ಸಿ ಕೇವಲ 10 ನಿಮಿಷ ಕ್ರೀಡಾಂಗಣದಲ್ಲಿ, ಅಲ್ಲಿಂದ ತೆರಳಿದ್ದಾರೆ. ಮೆಸ್ಸಿ ನೋಡಲೆಂದೇ 5000 ದಿಂದ 50000 ಸಾವಿರದವರೆಗೆ ಟಿಕೆಟ್ ಕೊಟ್ಟು ಸ್ಟೇಡಿಯಂಗೆ ಬಂದವರು, ಮೆಸ್ಸಿಯನ್ನ ನೋಡಲಾಗದೇ ಹತಾಶೆಯಿಂದ ಸ್ಟೇಡಿಯಂನ ವಿಐಪಿ ಗೇಟ್ ನಿಂದ ಮೈದಾನಕ್ಕೆ ನುಗ್ಗಲು ಯತ್ನಿಸಿದ್ದಾರೆ. ಕೋಪಗೊಂಡು ಆಸನಗಳ ಮೈದಾನಕ್ಕೆ ಎಸೆದಿದ್ದಾರೆ. ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು ಹರಸಾಹಸ ಪಡಬೇಕಾಗಿದೆ. ಅಭಿಮಾನಿಗಳು ಕೈಗೆ ಸಿಕ್ಕಸಿಕ್ಕದ್ದನ್ನ ಭದ್ರತಾಪಡೆಗಳ ಮೇಲೆ ಬಿಸಾಡಿದ್ದು, ಸಿಬ್ಬಂದಿ ಕಂಡುಬಂದಿದ್ದಾರೆ.