Union Budget 2026: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್​ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?

Union Budget 2026: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್​ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?


ಜನವರಿ 27: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ನಿರ್ಮಲಾ ಸೀತಾರಾಮನ್) ಅವರು ಇಂದು (ಜ. 27) ಮಂಗಳವಾರ ಹಲ್ವಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಬಜೆಟ್ ಪ್ರೆಸ್ ಕಟ್ಟಡದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಜೆಟ್ (ಕೇಂದ್ರ ಬಜೆಟ್ 2026) ಸಿದ್ಧತೆಯ ಅಂತಿಮ ಕಾರ್ಯಕ್ರಮ ಈ ಹಲ್ವಾ ಮೂಲಕ ಆಗುತ್ತದೆ. ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಹಣಕಾಸು ಸಚಿವಾಲಯದ ಅಡಿಯ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದೆ.

ಯಾಕಿದು ಹಲ್ವಾ ಕಾರ್ಯಕ್ರಮ?

ಹಲ್ವಾ ಕಾರ್ಯಕ್ರಮದ ಬಜೆಟ್ ಸಿದ್ಧತೆಯ ಒಂದು ಸಣ್ಣ ಭಾಗ. ಪ್ರತೀ ಬಾರಿಯ ಬಜೆಟ್ಗೆ ಮುಂಚೆಯೇ ಇದು ನಡೆಯುತ್ತಿದೆ. ಬಜೆಟ್ ತಯಾರಿಕೆಯಲ್ಲಿ ತೊಡಗಿರುವವರೆಲ್ಲರೂ ಖುಷಿಯಿಂದ ಸಿಹಿ ತಿನ್ನುವ ಸಂದರ್ಭವಿದು.

ಇದನ್ನೂ ಓದಿ: ಬಜೆಟ್‌ನಲ್ಲಿ ಜಿಎಸ್ಟಿ ದರ ಇಳಿಕೆ ಕ್ರಮ: ಎಂಎಸ್‌ಎಂಇಗಳಿಂದ ನಿರೀಕ್ಷೆ

ದೊಡ್ಡ ಬಾಣಲೆಯಲ್ಲಿ ಹಲ್ವಾ ಸಿದ್ಧಪಡಿಸದಿದ್ದರೆ. ಹಣಕಾಸು ಸಚಿವರು ಅಥವಾ ಬಜೆಟ್ ಮಂಡಿಸುವವರು ಬಾಣಲೆಯಲ್ಲಿರುವ ಹಲ್ವಾವನ್ನು ತಿರುಗಿಸುವ ಸಂಪ್ರದಾಯ. ಆ ಬಳಿಕ ಎಲ್ಲರೂ ಹಲ್ವಾ ತಿಂದು ಸಂತೋಷ ಪಡುತ್ತಾರೆ. ಬಜೆಟ್ ಸಿದ್ಧತೆಯಲ್ಲಿ ಶ್ರಮ ಪಟ್ಟ ಎಲ್ಲರಿಗೂ ಸಿಹಿ ತಿನ್ನಿಸುವ ಮೂಲಕ ಸಚಿವರು ತೋರುವ ಕೃತಜ್ಞತೆಯ ಸಂದರ್ಭ ಅದಕ್ಕಾಗಿ. ಭಾರತೀಯ ಸಂಪ್ರದಾಯದಲ್ಲಿ ಒಳ್ಳೆಯ ಕೆಲಸ ಪ್ರಾರಂಭವಾದಾಗ ಮತ್ತು ಯಶಸ್ವಿಯಾದಾಗ ಸಿಹಿ ತಿನ್ನುತ್ತಾರೆ. ಹಲ್ವಾ ಕಾರ್ಯಕ್ರಮ ಅದೇ ಸಂಪ್ರದಾಯದಲ್ಲಿ ರೂಪುಗೊಂಡಿದೆ.

ಹಲ್ವಾ ಕಾರ್ಯಕ್ರಮದ ಬಳಿಕ ಅಧಿಕಾರಿಗಳು ಲಾಕ್

ಹಲ್ವಾ ಕಾರ್ಯಕ್ರಮವು ಬಜೆಟ್ ಸಿದ್ಧತೆಯ ಅಂತಿಮ ಹಂತಕ್ಕೆ. ಇದಾದ ಬಳಿಕ ಬಜೆಟ್ ಸಿದ್ಧಪಡಿಸುವವರೆಲ್ಲರೂ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ಸೇರುತ್ತಾರೆ. ಅಕ್ಷರಶಃ ಅವರು ಲಾಕ್ ಆಗಿರುತ್ತಾರೆ. ಹೊರಗಿನ ಸಂಪರ್ಕ ಇರುವುದಿಲ್ಲ. ಮೊಬೈಲ್ ಬಳಸಿದೆ. ಬಜೆಟ್ ಮಂಡನೆ ಪ್ರಾರಂಭವಾಗುವವರೆಗೂ ಅವರಿಗೆ ಇದು ಲಾಕಿನ್ ಅವಧಿ. ಬಜೆಟ್ ಅಂಶಗಳು ಹೊರಗೆ ಸೋರಿಕೆಯಾಗಬಾರದೆಂದು ಮುಂಜಾಗ್ರತೆಯಾಗಿ ಈ ಬಿಗಿಕ್ರಮ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್ ನಲ್ಲಿ ಗಮನಿಸಬೇಕಾದ ಸಂಗತಿಗಳು

ನಾರ್ತ್ ಬ್ಲಾಕ್ನಲ್ಲಿ ಬಜೆಟ್ ಪ್ರೆಸ್ ಇರುವುದು. ಹಣಕಾಸು ಸಚಿವಾಲವು ಇದೆ ನಾರ್ತ್ ಬ್ಲಾಕ್‌ನಲ್ಲಿ ಇತ್ತು. ಈಗ ಕರ್ತವ್ಯ ಭವನಕ್ಕೆ ಅದರ ಕಚೇರಿ ವರ್ಗವಾಗಿದೆ. ಆದರೂ 2026-27ರ ಬಜೆಟ್ ಅನ್ನು ನಾರ್ತ್ ಬ್ಲಾಕ್‌ನಲ್ಲಿರುವ ಪ್ರೆಸ್‌ನಲ್ಲೇ ಮುದ್ರಿಸಲಾಗುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *